Job Description: * ಪ್ರಸ್ತುತ ಈ ಬಾರಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್'ಗೆ 'ವೇಗವಾಗಿ, ಎತ್ತರಕ್ಕೆ, ಶಕ್ತಿಶಾಲಿಯಾಗಿʼ ಎಂಬ ಧ್ಯೇಯವಾಕ್ಯವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿತ್ತು, ಇದೀಗ ಈ ಧ್ಯೇಯವಾಕ್ಯಕ್ಕೆ "ಜೊತೆಯಾಗಿ" ಎಂಬ ಮತ್ತೊಂದು ಪದವನ್ನು ಸೇರ್ಪಡೆಮಾಡಿದ್ದಾರೆ, ಈ ಮಾಹಿತಿಯನ್ನು ಇತ್ತೀಚಿಗೆ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನದಲ್ಲಿ ತಿಳಿಸಿದ್ದಾರೆ. * ಪ್ರಸ್ತುತ "ವೇಗವಾಗಿ, ಎತ್ತರಕ್ಕೆ, ಶಕ್ತಿಶಾಲಿಯಾಗಿ, ಜೊತೆಯಾಗಿ" ಇದು ಈ ಬಾರಿಯ ಟೋಕಿಯೊ ಒಲಿಂಪಿಕ್ಸ್'ನ ಧ್ಯೇಯವಾಕ್ಯವಾಗಿದೆ. * ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ನ ಧ್ಯೇಯವಾಕ್ಯಕ್ಕೆ ಜೊತೆಯಾಗಿ ಎಂಬ ಪದವನ್ನು ಸೇರಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಅವರು ಏಪ್ರಿಲ್ನಲ್ಲಿ ಪ್ರಸ್ತಾವವನ್ನು ಮಾಡಿದ್ದರು, ಸಮಿತಿಯ ಕಾರ್ಯಕಾರಿ ಮಂಡಳಿಯು ಈ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. * ಈ ಬಾರಿಯ ಧ್ಯೇಯವಾಕ್ಯವನ್ನು, 1894 ರಲ್ಲಿ ನಡೆದ ಒಲಿಂಪಿಕ್ ಚಳವಳಿಯಲ್ಲಿ ಆಧುನಿಕ ಒಲಿಂಪಿಕ್ಸ್ನ ಸಂಸ್ಥಾಪಕ ಎಂದು ಪ್ರಸಿದ್ದಿಯಾಗಿರುವ ಪಿಯರೆ ಡಿ ಕೌಬಾರ್ಟನ್ ಅವರ ಮನವಿಯ ಮೇರೆಗೆ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.