Job Description: * ಪ್ರಸ್ತುತ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ(CEO) ಆದರ್ ಪೂನವಾಲ್ಲಾ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪ್ರಕಾರ, ಒಟ್ಟಾರೆ 16 ಯುರೋಪಿಯನ್ ರಾಷ್ಟ್ರಗಳು ಇದೀಗ ಕೋವಿಶೀಲ್ಡ್ ಲಸಿಕೆಯನ್ನು ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರವೇಶಕ್ಕಾಗಿ ಗುರುತಿಸಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತೀಯ ಸರ್ಕಾರವು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡು ಲಸಿಕೆಗಳನ್ನು ಗುರುತಿಸಲು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸುತ್ತಿದೆ. * ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸುವ 16 ದೇಶಗಳು: ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಫಿನ್ಲ್ಯಾಂಡ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಐರ್ಲೆಂಡ್, ಲಾಟ್ವಿಯಾ, ನೆದರ್ಲ್ಯಾಂಡ್ಸ್, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು, ಈ 16 ದೇಶಗಳಲ್ಲಿ 13 ಮಂದಿ ಇಯು ಸದಸ್ಯ ದೇಶಗಳಿವೆ. * ಅಂತರಾಷ್ಟ್ರೀಯ ಪ್ರವೇಶಕ್ಕೆ ಗುರುತಿಸುವಿಕೆ ಎಂದರೆ '2' ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ತಗೆದುಕೊಂಡಿರುವ ಭಾರತೀಯ ಪ್ರಜೆಗಳಿಗೆ ಯುರೋಪಿಯನ್ ದೇಶಗಳಿಗೆ ಪ್ರಯಾಣಿಸಲು ಅವಕಾಶವಿರುತ್ತದೆ ಎಂದರ್ಥ.