Job Description: * ಭಾರತದ ಮೊದಲ ಕ್ಷಿಪ್ರ ಎಲೆಕ್ಟ್ರಾನಿಕ್ ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ COVID-19 ಪರೀಕ್ಷೆಯ "ಕೋವಿಹೋಮ್" ಕಿಟ್'ನ್ನು IIT ಹೈದರಾಬಾದ್'ನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. * ರೋಗಲಕ್ಷಣವಿರುವ ರೋಗಿಗಳಿಗೆ ಈ "ಕೋವಿಹೋಮ್" ಕಿಟ್'ನ್ನು ಬಳಸಿ 30 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದ್ದಾರೆ, ಹಾಗೂ ಈ ಪರೀಕ್ಷೆಗೆ ಆರ್ಟಿ-ಪಿಸಿಆರ್ ಪರೀಕ್ಷೆಯ ಅವಶ್ಯಕತೆ ಇರುವದಿಲ್ಲ ಎಂದಿದ್ದಾರೆ. * ಆರ್ಟಿ-ಪಿಸಿಆರ್ ವಿಧಾನದ ಮೂಲಕ ಸಕಾರಾತ್ಮಕತೆ ಅಥವಾ ನಕಾರಾತ್ಮಕತೆಗಾಗಿ ಮಾದರಿಗಳನ್ನು ದೃಢಪಡಿಸಲಾಗಿದೆ, ಈ ಕಿಟ್ 94.2% ದಕ್ಷತೆ, 91.3% ಸಂವೇದನೆ, ಹಾಗೂ 98.2% ನಿರ್ದಿಷ್ಟತೆಯುನ್ನು ಹೊಂದಿದೆ ಎಂದು ವರದಿಯನ್ನು ದೃಢಪಡಿಸಿದೆ. * IIT ಹೈದರಾಬಾದ್ ಅಭಿವೃದ್ಧಿ ಪಡಿಸಿರುವ ಟೆಸ್ಟ್ ಕಿಟ್'ನ ಬೆಲೆ 400 ರೂ. ಇರಲಿದೆ ಎಂದು ತಿಳಿಸಿದ್ದಾರೆ.