Job Description: * 2021 ರ ಜುಲೈ. 14 ರಂದು ಟ್ವಿಟರ್ ಇಂಕ್ ತನ್ನ ಫ್ಲೀಟ್ಸ್ ವೈಶಿಷ್ಟ್ಯವನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. * ಟ್ವಿಟರ್ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಮುಂಬರುವ ಆಗಸ್ಟ್ 3 ರ ನಂತರ ಈ ವೈಶಿಷ್ಟ್ಯವು ಲಭ್ಯವಿರುವುದಿಲ್ಲ ಎಂದು ತಿಳಿಸಿದೆ, ಪ್ರಸ್ತುತ ಈ ಫ್ಲೀಟ್ ಸೇವೆಯು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಿಂದಾಗಿ ಟ್ವಿಟರ್ ಈ ವೈಶಿಷ್ಟ್ಯವನ್ನು ಸ್ಥಗಿತಗೊಳಿಸಲಾಗುವದು ಎಂದು ತಿಳಿಸಿದೆ. * ಟ್ವಿಟರ್'ನ ಈ ಫ್ಲೀಟ್ ವೈಶಿಷ್ಟ್ಯವು ಇನ್ಸ್ಟಾಗ್ರಾಮ್ನ ಕಣ್ಮರೆಯಾಗುತ್ತಿರುವ ಕಥೆಗಳ ವೈಶಿಷ್ಟ್ಯಕ್ಕೆ ಹೋಲುವ ರೀತಿಯಲ್ಲಿದೆ. * ಈ ಸೇವೆಯನ್ನು 2020 ರ ನವೆಂಬರ್'ನಲ್ಲಿ ಟ್ವೀಟ್ಗಳ ಮೂಲಕ ಸಾರ್ವಜನಿಕವಾಗಿ ಆಲೋಚನೆಗಳನ್ನು ಅಥವಾ ವಿಚಾರಗಳನ್ನು ಹಂಚಿಕೊಳ್ಳುವ ಜನರನ್ನು ಗುರಿಯಾಗಿಸುವ ಉದ್ದೇಶದಿಂದ ಆರಂಭಿಸಲಾಗಿತ್ತು. * ಈ ಫ್ಲೀಟ್ಗಳು ಕ್ಷಣಿಕವಾದ ಆಲೋಚನೆಗಳನ್ನು ಹಂಚಿಕೊಳ್ಳುವ ಮಾರ್ಗವಾಗಿದೆ, 24 ಗಂಟೆಗಳ ನಂತರ ಈ ಫ್ಲೀಟ್ಗಳು ಕಣ್ಮರೆಯಾಗುತ್ತವೆ, ಇದರ ನಂತರವು ಜನರು ನೇರ ಸಂದೇಶಗಳೊಂದಿಗೆ ಫ್ಲೀಟ್ಗಳಿಗೆ ಮಾತ್ರ ಪ್ರತಿಕ್ರಿಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ. * ಟ್ವಿಟರ್ ಅಮೇರಿಕನ್ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೇವೆಯಾಗಿದೆ, ಹಾಗೂ ವಿಶ್ವದಾದ್ಯಂತ 2 5ಕ್ಕೂ ಅಧಿಕ ಕಚೇರಿಗಳನ್ನು ಹೊಂದಿದೆ. * ಪ್ರಸ್ತುತ ಟ್ವಿಟರ್'ನ್ನು 2006 ರ ಮಾರ್ಚ್'ನಲ್ಲಿ ಜ್ಯಾಕ್ ಡಾರ್ಸೆ, ನೋವಾ ಗ್ಲಾಸ್, ಬಿಜ್ ಸ್ಟೋನ್ ಮತ್ತು ಇವಾನ್ ವಿಲಿಯಮ್ಸ್ ರಚಿಸಿ 2006 ರ ಜುಲೈ'ನಲ್ಲಿ ಆರಂಭಿಸಿದ್ದಾರೆ.