Job Description: * ನೇಪಾಳಿ ಕಾಂಗ್ರೆಸ್ನ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಅವರು ಪ್ರಸ್ತುತ ನೇಪಾಳದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. * ನೇಪಾಳ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಅನುಸಾರ ಪ್ರತಿಪಕ್ಷ ನಾಯಕರಾಗಿರುವ 75 ವರ್ಷದ ದೇವುಬಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಲು ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ನೋಟಿಸ್ ಹೊರಡಿಸಿದ್ದರು. * ಶೇರ್ ಬಹದ್ದೂರ್ ದೇವುಬಾ ಅವರು 5ನೇ ಬಾರಿಗೆ ಪ್ರಧಾನ ಮಂತ್ರಿಯಾಗಿದ್ದರೆ, ಈ ಹಿಂದೆ ಸೆಪ್ಟೆಂಬರ್ 1995 ರಿಂದ ಮಾರ್ಚ್ 1997 ವರೆಗೆ, ಜುಲೈ 2001ರಿಂದ ಅಕ್ಟೋಬರ್ 2002ರ ವರೆಗೆ, ಜೂನ್ 2004ರಿಂದ ಫೆಬ್ರವರಿ 2005ರ ವರೆಗೆ, ಜೂನ್ 2017 ರಿಂದ ಫೆಬ್ರವರಿ 2018ರ ವರೆಗೆ 4 ಬಾರಿ ನೇಪಾಳದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.