Job Description: * ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮತ್ತು ರಾಷ್ಟ್ರೀಯ ಪಾವತಿ ನಿಗಮ (NPCI)ಗಳು 6ನೇ ತರಗತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತಾ ಪಠ್ಯಕ್ರಮವನ್ನು ಪರಿಚಯಿಸಲು ಮುಂದಾಗಿವೆ. * ಇದನ್ನು "ಆರ್ಥಿಕ ಸಾಕ್ಷರತೆ" ವಿಷಯದ ಭಾಗವಾಗಿ ಆರಂಭಿಸಲಾಗಿದೆ, ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರಾಥಮಿಕ ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕಾರಿಯಾಗಲಿದೆ. * ಇದು ಕಾರ್ಡ್ಗಳು, ಯುಪಿಐ, ವ್ಯಾಲೆಟ್ ಸೇರಿದಂತೆ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳ ವಿಧಾನಗಳ ಮತ್ತು ಮೂಲ ಹಣಕಾಸು ಪರಿಕಲ್ಪನೆಗಳು ಇರಲಿವೆ, ಹಾಗೂ ಬ್ಯಾಂಕಿಂಗ್ನ ಮೂಲವಾಗಿರುವ ನಾಣ್ಯಗಳಿಂದ ಕಾಗದದ ಹಣಕ್ಕೆ ಪರಿವರ್ತನೆ, ಬ್ಯಾಂಕುಗಳ ಕಾರ್ಯಾಚರಣೆ ಮತ್ತು ಸೇವೆಗಳ ಬಗ್ಗೆ ಮಾಹಿತಿ ನೀಡುತ್ತದೆ. * 7 ಮತ್ತು 8 ತರಗತಿಗಾಗಿ ಸಿಬಿಎಸ್ಇಯೊಂದಿಗೆ ಎನ್ಪಿಸಿಐ ಕೋರ್ಸ್ ವಿಷಯಗಳ ಅಭಿವೃದ್ಧಿಗೆ ಕಾರ್ಯನಿರ್ವಹಿಸಲಿದೆ. * ಈ ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಮನಸ್ಥಿತಿಯನ್ನು ಬೆಳಸಲಾಗುತ್ತದೆ. * ಈ ಹೊಸ ಪಠ್ಯಪುಸ್ತಕವು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಕೇಂದ್ರೀಕರಿಸಲಿದೆ, ಹಾಗೂ ಆರ್ಥಿಕ ಸಾಕ್ಷರತೆಯ ಸಣ್ಣ ಮಾಡ್ಯೂಲ್ ಇದಾಗಿದೆ, ಇದರಿಂದಾಗಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಹಣಕಾಸಿನ ವಿಷಯಗಳ ಬಗ್ಗೆ ಶಿಕ್ಷಣ ನೀಡಲಿದೆ ಎಂದಿದ್ದಾರೆ.