Job Description: * ಕೇಂದ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿರುವ ಪ್ರಕಾಶ್ ಜಾಬ್ಡೇಕರ್ ಅವರು ವಾಹನ ಸಾಮರ್ಥ್ಯ ಪರೀಕ್ಷೆಗೆ ಬೃಹತ್ ಪರೀಕ್ಷಾ ಟ್ರ್ಯಾಕ್'ನ್ನು ಉದ್ಘಾಟಣೆ ಮಾಡಿದ್ದಾರೆ. * ಈ ಟ್ರ್ಯಾಕ್ ಮಧ್ಯ ಪ್ರದೇಶದ ಇಂದೋರ್ನ ಪೀಠಂಪುರದಲ್ಲಿದೆ, ರಸ್ತೆಯ ಉದ್ದವು 11.3 ಕಿ.ಮೀ. ಮತ್ತು 52 ಅಡಿ ಅಗಲವಿದೆ, ಈ ಟ್ರ್ಯಾಕ್'ನಲ್ಲಿ ನಾಲ್ಕು ಪಥಗಳಿವೆ. * ಏಷ್ಯಾದಲ್ಲೇ ಅತೀ ಉದ್ದದ ಪರೀಕ್ಷಾ ಟ್ರ್ಯಾಕ್ ಆಗಿದೆ ಎಂದು ತಿಳಿಸಿದ್ದಾರೆ. * ಈ ಟ್ರ್ಯಾಕ್'ನಲ್ಲಿ ಹೊಸದಾಗಿ ತಯಾರಿಸಲಾಗಿರುವ ವಾಹನಗಳನ್ನು ಚಲಾಯಿಸಿ ಪರೀಕ್ಷಿಸಬಹುದಾಗಿದೆ, ಪ್ರಕಾಶ್ ಜಾಬ್ಡೇಕರ್ ಅವರು ನ್ಯಾಶನಲ್ ಆಟೋಮೊಟಿವ್ ಟೆಸ್ಟ್ ಟ್ರ್ಯಾಕ್ಸ್' ಕಾರ್ಯಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. * ಈ ಟ್ರ್ಯಾಕ್'ನಲ್ಲಿ ವಾಹನಗಳ ಗರಿಷ್ಠ ವೇಗ, ಸಾಮರ್ಥ್ಯ, ಇಂಧನ ಕ್ಷಮತೆ, ಅತಿ ವೇಗ ನಿರ್ವಹಣೆ, ಪರೀಕ್ಷೆಗಳನ್ನೂ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.