Job Description: * ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಕೇಂದ್ರ ಸರ್ಕಾರವು ಸಿದ್ಧವಾಗುತ್ತಿದೆ, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಮುಕ್ತಾಯವಾದ ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ ಹಾಗೂ ರಾಜ್ಯತ್ವವನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಮುಖಂಡರಿಗೆ ಪ್ರಧಾನಿ ಮೋದಿ ಭರವಸೆಯನ್ನು ನೀಡಿದರು. * ಪ್ರಧಾನಿ ಮೋದಿ ಅವರು J&K'ಯ 14 ನಾಯಕರನ್ನು ಒಳಗೊಂಡ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ್ದರು, ಈ ಹಿಂದೆ ಕೇಂದ್ರವು 370 ನೇ ವಿಧಿಯನ್ನು 2019 ರ ಆಗಸ್ಟ್ ತಿಂಗಳಿನಲ್ಲಿ ರದ್ದುಪಡಿಸಿದ್ದಾರೆ. * ವಿಧಾನಸಭಾ ಚುನಾವಣೆ ನಡೆಸುವ ಮೊದಲು ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವವನ್ನು ಪುನಃಸ್ಥಾಪಿಸಬೇಕೆಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಒತ್ತಡವನ್ನು ಹೇರಿದರು ಎಂದು ತಿಳಿದು ಬಂದಿದೆ.