Job Description: * ಪ್ರಸ್ತುತ 2021 ರ ಜೂನ್. 24 ರಂದು ಹೊಸದಿಲ್ಲಿ ಆಯೋಜಿಸಲಾಗಿದ್ದ ಟಾಯ್ಕಥಾನ್'ನಲ್ಲಿ ಭಾಗವಹಿಸಿದ ಜನಗಳ ಜತೆ ಸಂವಾದವನ್ನು ನಡೆಸಿದರು ಹಾಗೂ ಸ್ಥಳೀಯ ಆಟಿಕೆಗಳಿಗೆ ಪ್ರೋತ್ಸಾಹ ದೊರಕಿಸುವಂತೆ ಪ್ರಧಾನಿ ಮೋದಿ ಅವರು ಆಟಿಕೆ ಉದ್ಯಮಕ್ಕೆ ಕರೆ ನೀಡಿದರು. * ಪ್ರಸ್ತುತ ಭಾರತ ದೇಶವು 80% ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದೆ, ಈ ಕಾರಣದಿಂದಾಗಿ ಭಾರತದ ಕೋಟ್ಯಾಂತರ ರೂ. ಹಣ ವಿದೇಶಕ್ಕೆ ಹೊರಹೋಗುತ್ತಿದೆ, ಪ್ರಸ್ತುತ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ 1.5 ಬಿಲಿಯನ್ ಡಾಲರ್'ಆಗಿದೆ. * ಭಾರತದ ಸಾಮರ್ಥ್ಯ, ಕಲೆ, ಸಂಸ್ಕೃತಿ, ಸಮಾಜವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅರಿತುಕೊಳ್ಳಲು ಜಗತ್ತು ಬಯಸುತ್ತಿದೆ, ಇದರ ಜೊತೆ ಸ್ಥಳೀಯ ಆಟಿಕೆಗಳ ಮೂಲಕ ಪಾರಂಪರಿಕ ಜ್ಞಾನವನ್ನು ಇಡೀ ವಿಶ್ವಕ್ಕೆ ಪರಿಚಯಿಸಲು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. * 2021 ಕ್ಕೆ ಜನವರಿ 5 ರಂದು ಶಿಕ್ಷಣ , ಜವಳಿ, MSME, ಮಾಹಿತಿ ಮತ್ತು ಪ್ರಸಾರ ಇಲಾಖೆಗಳು ಹಾಗೂ ಹಲವು ಸಂಘಟನೆಗಳ ಜೊತೆಯಾಗಿ ಟಾಯ್ಕಥಾನ್ ಚಾಲನೆ ನೀಡಿದ್ದಾರೆ.