Job Description: * ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಭಾರತ ಹಾಗೂ ಅಮೆರಿಕದ ನೌಕಾಪಡೆಗಳು 2 ದಿನಗಳ ಜಂಟಿ ಸಮರಾಭ್ಯಾಸವನ್ನು ಪ್ರಾರಂಭಿಸಿವೆ. * ಚೀನಾ ದೇಶವು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಪ್ರಾಬಲ್ಯ ವೃದ್ಧಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದೆ, ಇದರಿಂದಾಗಿಯೇ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಈ ಸಮರಾಭ್ಯಾಸಕ್ಕೆ ಚಾಲನೆ ನೀಡಿವೆ. * ಅಮೆರಿಕ ರಾಷ್ಟ್ರದ ಯುದ್ಧವಿಮಾನಗಳನ್ನು ಒಳಗೊಂಡ ಹಡಗು "ಯುಎಸ್ಎಸ್ ರೊನಾಲ್ಡ್ ರೇಗನ್", ಮತ್ತು 'ಎಫ್-18' ಯುದ್ಧವಿಮಾನಗಳು, ಇದರ ಜೊತೆಗೆ ಹವಾಮಾನ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ 'ಇ-2ಸಿ' ಯುದ್ಧವಿಮಾನಗಳನ್ನು ಈ ಜಂಟಿ ಸಮರಾಭ್ಯಾಸದಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಅಮೇರಿಕಾ ತಿಳಿಸಿದೆ. * ಭಾರತವು ಜಾಗ್ವಾರ್ ಮತ್ತು ಸುಖೋಯ್-30 ಎಂಕೆಐ ಯುದ್ಧವಿಮಾನಗಳು, ಹಾಗೂ ಐಎಲ್-78 ವಿಮಾನಗಳು, ಮತ್ತು ಇದರ ಜೊತೆಗೆ INS ಕೊಚ್ಚಿ ಮತ್ತು INS ತೇಗ್ ಯುದ್ಧನೌಕೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಭಾರತ ತಿಳಿಸಿದೆ. * ಈ ಜಂಟಿ ಸಮರಾಭ್ಯಾಸವು ಕನ್ಯಾಕುಮಾರಿಯಿಂದ ಅಂದರೆ ಸುಮಾರು 300 KM ದೂರದ ಚೀನಾದ ಪೋರ್ಟ್ ಸಿಟಿ ಪ್ರದೇಶದವರೆಗೆ ನಡೆಯಲಿದೆ. * ಈ ಜಂಟಿ ಸಮಾರಾಭ್ಯಾಸದ ಉದ್ದೇಶ ಏನೇಂದರೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವದಾಗಿದೆ.