Job Description: * ಪ್ರಸ್ತುತ ವಿಶ್ವ ಬ್ಯಾಂಕ್ ವರದಿ ನೀಡಿರುವ ಪ್ರಕಾರ ಪಾಕಿಸ್ತಾನದಲ್ಲಿ 2020 ರಲ್ಲಿ ಬಡತನ ರೇಖೆಯು 4.4 ರಿಂದ 5.4 ಕ್ಕೆ ಹೆಚ್ಚಾಗಿದೆ, ದೇಶದಲ್ಲಿ 2 ಮಿಲಿಯನ್ ಜನರು ಬಡತನ ರೇಖೆಗಿಂತ ಕೆಳಮಟ್ಟದಲ್ಲಿದ್ದಾರೆ ಎಂದು ತಿಳಿಸಿದೆ. * 2020-21 ರಲ್ಲಿ ಪಾಕಿಸ್ತಾನದ ಬಡತನವು 39.3 ರಷ್ಟಿದ್ದು, ನಂತರ 2021-22 ರಲ್ಲಿ ಇದು ಶೇ.39.2 ರಷ್ಟು ಇರಲಿದೆ, ಮತ್ತೇ ನಂತರದ ದಿನಗಳಲ್ಲಿ ಅಂದರೆ 2022-23 ರಲ್ಲಿ 37.9 ಕ್ಕೆ ಇಳಿಕೆ ಕಾಣಬಹುದು ಎಂದು ಅಂದಾಜಿಸಿ ದಿ ನ್ಯೂಸ್ ಇಂಟರ್ ನ್ಯಾಷನಲ್ ಮಾಹಿತಿಯನ್ನು ನೀಡಿದೆ. * ವಿಶ್ವಬ್ಯಾಂಕ್ ಪಾಕಿಸ್ತಾನದ ಕೆಳ ಹಾಗೂ ಮಧ್ಯಮ ಆದಾಯದ ಬಡತನ ರೇಖೆಯನ್ನು ಪರಿಗಣಿಸಿ ವರದಿಯನ್ನು ಮಾಡಿದೆ, ಹಾಗೂ ಇಲ್ಲಿನ ಆರ್ಥಿಕ ವರ್ಷದ ಜಿಡಿಪಿ ಶೇ.08 ಕ್ಕೆ ಕುಸಿಯಲಿದೆ ಎಂದು ವರದಿ ಮಾಡಿದೆ.