Job Description: *ಒಲಿಂಪಿಕ್ಸ್ ಕ್ರೀಡಾಪಟುಗಳ ತರಬೇತಿ ಹಾಗೂ ಸಿದ್ಧತೆಗಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರವಿವಾರ 10 ಕೋಟಿ ರೂ.ದೇಣಿಗೆ ನೀಡಲಿರುವುದಾಗಿ ಪ್ರಕಟಿಸಿದೆ. *ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ಕಾರ್ಯದರ್ಶಿ ಜಯ ಶಾ ಭಾಗವಹಿಸಿದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. *ಬಿಸಿಸಿಐನ ಕಾರ್ಯದರ್ಶಿ ಜಯ ಶಾ "ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ನಮ್ಮ ಕ್ರೀಡಾಪಟುಗಳ ತಯಾರಿ ಹಾಗೂ ಇತರ ತುರ್ತು ಉದ್ದೇಶಗಳಿಗಾಗಿ ಇದನ್ನು (ನಿಧಿ) ಬಳಸಲಾಗುತ್ತದೆ. ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (IOA) ಜೊತೆಗೆ ಮಾತನಾಡಿದ ನಂತರ ಪಾವತಿಯ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ'' ಎಂದು ತಿಳಿಸಿದರು. *ಮುಂಬರುವ ಒಲಿಂಪಿಕ್ಸ್ ಕ್ರೀಡೆಗಳು ಜುಲೈ 23 ರಿಂದ ಟೋಕಿಯೊದಲ್ಲಿ ಆರಂಭವಾಗಲಿದೆ.