Job Description: * ಪ್ರಸ್ತುತ ಇರಾನ್'ನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಅವರು ಆಯ್ಕೆಯಾಗಿದ್ದಾರೆ. * ವಿದೇಶಾಂಗ ಸಚಿವರಾಗಿರುವ ಮೊಹಮ್ಮದ್ ಜಾವಾದ್ ಜರೀಫ್ ಅವರು ಈ ರೈಸಿ ಅವರ ಆಯ್ಕೆಯನ್ನು ಘೋಷಣೆ ಮಾಡಿದ್ದಾರೆ. * ಈ ಬಾರಿಯ ಇರಾನ್'ನ ಅಧ್ಯಕ್ಷ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ, ಅದರಲ್ಲಿ ಇಬ್ರಾಹಿಂ ರೈಸಿ ಅವರು ಪರ 1.78 ಕೋಟಿ ಮತಗಳುನ್ನು ಪಡೆದಿದ್ದಾರೆ, ಹಾಗೂ ಇವರ ಪ್ರತಿಸ್ಪರ್ಧಿಗಳಾಗಿರುವ ಮೊಹಸೆನ್ ರೆಝಿ 33 ಲಕ್ಷ ಮತ್ತು ಹೆಮ್ಮಟ್ಟಿ 24 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. * ಇರಾನ್ ನೂತನ ಅಧ್ಯಕ್ಷರಾಗಿ 60 ವರ್ಷ ವಯಸ್ಸಿನ ಇಬ್ರಾಹಿಂ ರೈಸಿ ಅವರು ಆಗಸ್ಟ್'ನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ, ಈ ಮೊದಲು ಇಬ್ರಾಹಿಂ ರೈಸಿ ಅವರು ಇರಾನ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. * ಸದ್ಯ ಇರಾನ ರಾಷ್ಟ್ರವು ಅಮೆರಿಕದ ನಿರ್ಬಂಧ, ಹಾಗೂ ಅಣ್ವಸ್ತ್ರ ಯೋಜನೆ ಸೇರಿ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ ಎಂದು ತಿಳಿದು ಬಂದಿದೆ.