Job Description: * ಪ್ರಸ್ತುತ ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರೀಸರ್ಜ್ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ಚೀನಾ, ಪಾಕಿಸ್ತಾನ ಹಾಗೂ ಭಾರತ ಕ್ರಮವಾಗಿ 350, 165 ಮತ್ತು 156 ಪರಮಾಣು ಸಿಡಿತಲೆಗಳನ್ನು ಹೊಂದಿವೆ ಎಂದು ತಿಳಿದು ಬಂದಿದೆ, ಇದರಿಂದ ಈ 3 ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತ್ತಿರುವ ದೇಶಗಳಾಗಿ ಕಂಡು ಬಂದಿವೆ . * ಈ ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರೀಸರ್ಜ್ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನದಲ್ಲಿ ನೀಡಿರುವ ಮಾಹಿತಿ ಪ್ರಕಾರ, ವಿಶ್ವದಲ್ಲಿನ ಅಂದಾಜು 13,080 ಜಾಗತಿಕ ಪರಮಾಣು ಶಸ್ತ್ರಾಸ್ತ್ರದಲ್ಲಿ ಶೇಕಡ 90 ರಷ್ಟು ಭಾಗವನ್ನು ರಷ್ಯಾ ಮತ್ತು ಅಮೆರಿಕ ಹೊಂದಿವೆ. * ಈ ಹಿಂದಿನ ವರ್ಷ ಜನೇವರಿಯಲ್ಲಿ ಚೀನಾ, ಪಾಕಿಸ್ತಾನ ಮತ್ತು ಭಾರತ ಕ್ರಮವಾಗಿ 320, 160 ಹಾಗೂ 150 ಪರಮಾಣು ಸಿಡಿತಲೆಗಳನ್ನು ಹೊಂದಿದ್ದವು ಎಂದು ಸಿಪ್ರೈ ಅಧ್ಯಯನ ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ ಈ ವಿಶ್ವದ ಒಂಬತ್ತು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿವೆ.