Job Description: * ಗೂಗಲ್ ಸಂಸ್ಥೆಯು ಇಂಟರ್ನೆಟ್'ನಲ್ಲಿ ಜಾಹೀರಾತುಗಳನ್ನು ಹಾಕುವ ಸಂಧರ್ಭಗಳಲ್ಲಿ ತನ್ನ ಮಾರುಕಟ್ಟೆ ಪ್ರಭಾವವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ ಫ್ರಾನ್ಸ್ ರಾಷ್ಟ್ರವು ಗೂಗಲ್ ಕಂಪನಿಗೆ 220 ಮಿಲಿಯ ಯುರೋ (1,945 ಕೋಟಿ ರೂ.) ದಂಡ ವಿಧಿಸಿದೆ. * ಪ್ರಸ್ತುತ ನ್ಯೂಸ್ ಕಾರ್ಪ್, ಫ್ರೆಂಚ್ ದಿನಪತ್ರಿಕೆ ಲೆ ಫಿಗರೊ ಹಾಗೂ ಬೆಲ್ಜಿಯಮ್'ನ ಗ್ರೂಪ್ ರೊಸೆಲ್ ಎಂಬ ಮಾಧ್ಯಮ ಸಂಘಟನೆಗಳು, ಗೂಗಲ್ ಸಂಸ್ಥೆಯು ಆನ್ ಲೈನ್ ಜಾಹೀರಾತುಗಳ ಮಾರಾಟದಲ್ಲಿ ಏಕಸ್ವಾಮ್ಯವನ್ನು ಹೊಂದಿದೆ ಎಂದು ಆರೋಪವನ್ನು ಮಾಡಿದ್ದವು, ನಂತರ ಫ್ರಾನ್ಸ್ ಗೂಗಲ್ ಕಂಪನಿಗೆ ಈ ದಂಡವನ್ನು ವಿಧಿಸಿದೆ. * ಪ್ರಸ್ತುತ ಫ್ರಾನ್ಸ್'ನ ಏಕಸ್ವಾಮ್ಯ ನಿಗ್ರಹ ಸಂಸ್ಥೆಯು ಗೂಗಲ್ ಸಂಸ್ಥೆಯು ತನ್ನ ಜಾಹೀರಾತು ಹರಾಜು ವೇದಿಕೆಗಳಾದ ಎಡಿಎಕ್ಸ್ ಮತ್ತು ಡಬಲ್ ಕ್ಲಿಕ್ ಆಯಡ್ ಎಕ್ಸ್ ಚೇಂಜ್'ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ತಿಳಿಸಿದೆ.