Job Description: * ಪ್ರಸ್ತುತ ಇಂಗ್ಲೆಂಡ್ ತಂಡದ ವೇಗದ ಬೌಲರ್'ಆಗಿರುವ ಒಲಿ ರಾಬಿನ್ಸನ್ ಅವರನ್ನು ಲಿಂಗ ತಾರತಮ್ಯ ಮತ್ತು ಜನಾಂಗೀಯ ನಿಂದನೆ ಆರೋಪದ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್'ನಿಂದ ಅಮಾನತು ಮಾಡಲಾಗಿದೆ. * ಇಂಗ್ಲೆಂಡ್ ಬೌಲರ್ ಒಲಿ ರಾಬಿನ್ಸನ್ ಅವರು ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು. * ಈ ಹಿಂದೆ 2012 -13 ರಲ್ಲಿ ಬೌಲರ್ ಒಲಿ ರಾಬಿನ್ಸನ್ ಅವರು ಲಿಂಗ ತಾರತಮ್ಯ ಹಾಗೂ ಜನಾಂಗೀಯ ನಿಂದನೆಯ ಬಗ್ಗೆ ಅಂದರೆ ಮುಸ್ಲಿಮರನ್ನು ಭಯೋತ್ಪಾದಕರು ಅಲ್ಲದೇ ಮಹಿಳೆಯರು ಮತ್ತು ಏಷ್ಯಾ ಜನರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು, ಸದ್ಯ ಇದೀಗ ಆ ಟ್ವೀಟ್'ಗಳು ಸುದ್ದಿಯಾಗಿರುವ ಕಾರಣದಿಂದಾಗಿ ಇವರನ್ನು ಅಮಾನತು ಮಾಡಲಾಗಿದೆ.