Job Description: * ಪ್ರಸ್ತುತ ಚೀನಾ ವಿಜ್ಞಾನಿಗಳು ಕೃತಕ ಸೂರ್ಯನನ್ನು ಸೃಷ್ಟಿಸಲು ಹಲವು ದಶಕಗಳಿಂದ ಪ್ರಯೋಗವನ್ನು ನಡೆಸುತಿದ್ದರು ಇದೀಗ ಆ ಪ್ರಯೋಗದಲ್ಲಿ ಆಶಾಕಿರಣವೊಂದು ಕಂಡುಕೊಂಡಿದ್ದಾರೆ, ಅದು ಕೃತಕ ಸೂರ್ಯನ ಸೃಷ್ಟಿಗೆ ಎಕ್ಸ್ ಪೆರಿಮೆಂಟಲ್ ಅಡ್ವಾನ್ಸ್ಡ್ ಸೂಪರ್ ಕಂಡಕ್ಟಿಂಗ್ ಟೋಕಮ್ಯಾಕ್ ಎಂಬ ಪ್ರಯೋಗವನ್ನು ಚೀನಾ ವಿಜ್ಞಾನಿಗಳು ಕೈಗೊಂಡಿದ್ದಾರೆ. * ಚೀನಾ ದೇಶದ ವಿಜ್ಞಾನಿಗಳು ಪರಮಾಣು ಸಮ್ಮಿಲನ ಪ್ರಯೋಗ ನಡೆಸುತ್ತಿದ್ದಾರೆ, ಈ ಪ್ರಯೋಗದಲ್ಲಿ ಬಳಸಿರುವ ಪ್ಲಾಸ್ಮಾ 101 ಸೆಕೆಂಡ್ಗಳ ಕಾಲ ಉರಿದು 120 ಮಿಲಿಯನ್ ಡಿಗ್ರಿ ಸೆಲ್ಸಿಯಸ್ನಷ್ಟು ಶಾಖವನ್ನು ಉತ್ಪಾದಿಸಿದೆ, ಮತ್ತೆ ತದನಂತರ ಪ್ಲಾಸ್ಮಾ 20 ಸೆಕೆಂಡ್ ಹೆಚ್ಚುವರಿಯಾಗಿ ಉರಿದಿದೆ ಇದರಿಂದ ಸೂರ್ಯನಿಗಿಂತ 10 ಪಟ್ಟು ಶಾಖ ಅಂದರೆ ಸರಿ ಸುಮಾರು 160 ಮಿಲಿಯನ್ ಡಿಗ್ರಿ ಸೆಲ್ಸಿಯಸ್ನಷ್ಟು ಶಾಖ ಉತ್ಪಾದಣೆ ಮಾಡಿದೆ. * ಈ ಹಿಂದೆ ಕೃತಕ ಸೂರ್ಯನನ್ನು ಸೃಷ್ಟಿಸಲು 2017ರಲ್ಲಿ ದೊಡ್ಡ ಮಟ್ಟದಲ್ಲಿ ಪ್ಲಾಸ್ಮಾವನ್ನು ಉರಿಸಲಾಗಿತ್ತು ಆದರೆ ಆ ಸಮಯದಲ್ಲಿ ಪ್ಲಾಸ್ಮಾ ಕೇವಲ 50 ಡಿಗ್ರಿ ಸೆಲ್ಸಿಯಸ್ನಷ್ಟು ಶಾಖವನ್ನು ಉತ್ಪಾದಣೆ ಮಾಡಿತ್ತು, ಇದರ ನಂತರ ವಿಜ್ಞಾನಿಗಳು 2018ರಲ್ಲಿ 101 ಡಿಗ್ರಿ ಸೆಲ್ಸಿಯಸ್ನಷ್ಟು ಶಾಖ ಉತ್ಪಾದಿಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು, ಆದರೆ ಇದೇ ಮೊದಲ ಬಾರಿಗೆ 101 ಸೆಕೆಂಡ್ಗಳತನಕ ಪ್ಲಾಸ್ಲಾ ನಿಧಾನಗತಿಯಲ್ಲಿ ಉರಿಯಿತು ಅಲ್ಲದೆ ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಾಖವನ್ನು ಉತ್ಪಾದಣೆ ಮಾಡಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. * ಈ ಕೃತಕ ಸೂರ್ಯನ ಪ್ರಯೋಗದಿಂದ ಚೀನಾ ವಿಜ್ಞಾನಿಗಳು ಸೀಮಿತವಾದ ಪರಮಾಣು ತ್ಯಾಜ್ಯಗಳನ್ನು ಬಳಸಿ ಸೂರ್ಯನಿಂದ ಹೆಚ್ಚು ಬೆಳಕು, ಶಾಖವನ್ನು ದೀರ್ಘಕಾಲ ಪಡೆಯುವಂತೆ ಮಾಡುವ ವಿಧಾನ ಆವಿಷ್ಕರಿಸಲು ಮುಂದಾಗಿದ್ದಾರೆ, ಪ್ರಸ್ತುತ ಈ ಪ್ರಯೋಗವನ್ನು ಸದರ್ನ್ ಯೂನಿವರ್ಸಿಟಿ ಆಫ್ ಸೈನ್ಸ್ ಆಯಂಡ್ ಟೆಕ್ನಾಲಜಿಯ ತಜ್ಞರು ನಡೆಸುತ್ತಿದ್ದಾರೆ.