Job Description: * ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆ ಜನವರಿ 6ರ ಕ್ಯಾಪಿಟಲ್ ಭವನದ ಮೇಲಿನ ದಾಳಿ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾರಣದಿಂದಾಗಿ ಇವರ ಫೇಸ್ಬುಕ್ ಖಾತೆಯನ್ನು 2 ವರ್ಷಗಳ ಕಾಲ ಅಮಾನತು ಮಾಡಲಾಗುವದು ಎಂದು ಫೇಸ್ಬುಕ್ ತಿಳಿಸಿದೆ. * ಫೇಸ್ಬುಕ್ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಬ್ಲಾಗ್ ಅವರು ನೀಡಿರುವ ಮಾಹಿತಿಯ ಪ್ರಕಾರ ಈ ಅಮಾನತು ಅವಧಿ ಕೊನೆಗೊಂಡ ನಂತರ ಇವರಿಂದ ಸಾರ್ವಜನಿಕ ಸುರಕ್ಷತೆಗೆ ಅಪಾಯವು ಕಡಿಮೆಯಾಗಿದೆಯೇ ಎಂದು ತಜ್ಞರು ಪರಿಶೀಲಿಸುತ್ತಾರೆ, ಮತ್ತು ಇನ್ನಿತರ ಬಾಹ್ಯ ಅಂಶಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ಬುಕ್ ಖಾತೆಯ 2ವರ್ಷಗಳ ಅಮಾನತು ನಿರ್ಣಯ ಜನವರಿ 7ರಿಂದ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಟ್ರಂಪ್ ಅವರ ಅಮಾನತಾದ ಖಾತೆಯು ಈ ಹಿಂದಿನ ಪೋಸ್ಟ್ಗಳನ್ನು ಇತರರು ಓದಬಹುದು ಹಾಗೂ ಕಾಮೆಂಟ್ ಮಾಡಬಹುದು, ಆದರೆ ಯಾವುದೇ ಹೊಸ ಪೋಸ್ಟ್ಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. * ಟ್ವಿಟರ್ ಸಂಸ್ಥೆಯು ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿದೆ.