Job Description: * ಇರಾನ್ ರಾಷ್ಟ್ರದ ಬೃಹತ್ ಯುದ್ಧನೌಕೆ "ಖಾರ್ಗ್" ಬೆಂಕಿಗೆ ಆಹಿತಿಯಾಗಿ ಒಮಾನ್ ಗಲ್ಪ್ ಕೊಲ್ಲಿಯಲ್ಲಿ ಮುಳುಗಿದೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ ಆದರೆ ನಿಖರವಾದ ಕಾರಣ ನೀಡಿಲ್ಲ. * ಈ ಖಾರ್ಗ್ ಯುದ್ಧನೌಕೆ ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿಯಲ್ಲಿ ಜಾಸ್ಕ್ ಬಂದರಿನ ಸಮೀಪ ಈ ಹಡಗು ಮುಳುಗಿದೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ. * ಪ್ರಸ್ತುತ ಈ ಖಾರ್ಗ್ ಯುದ್ಧನೌಕೆಯನ್ನು ಸರಕು ಸಾಗಣೆ ಮತ್ತು ಹೆಲಿಕಾಪ್ಟರ್ಗಳ ಚಿಮ್ಮು ಹಲಗೆಯಾಗಿ ಬಳಕೆ ಮಾಡಲಾಗುತಿತ್ತು, ಈ ಯುದ್ಧನೌಕೆಯನ್ನು 1977ರಲ್ಲಿ ಬ್ರಿಟನ್ನಲ್ಲಿ ನಿರ್ಮಾಣ ಮಾಡಲಾಗಿತ್ತು ನಂತರ 1984ರಲ್ಲಿ ಇರಾನ್ಗೆ ಈ ಯುದ್ಧ ನೌಕೆಯನ್ನು ಹಸ್ತಾಂತರಮಾಡಲಾಗಿತ್ತು.