Job Description: * ಸತತ ವರ್ಷಗಳಿಂದ KSRTC ಬ್ರಾಂಡ್ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಕಾನೂನು ಹೋರಾಟವನ್ನು ನಡೆಸುತಿದ್ದವು, ಇದೀಗ ಈ KSRTC ಬ್ರಾಂಡ್ ಕೇರಳ ರಾಜ್ಯದ ಪಾಲಾಗಿದೆ, ಇನ್ನು ಮುಂದೆ ಕರ್ನಾಟಕವು KSRTC ಹೆಸರು ಬಳಕೆ ಮಾಡದಂತೆ ಆದೇಶ ಹೊರಡಿಸಿದೆ. * ಪ್ರಸ್ತುತ ಟ್ರೇಡ್ ಮಾರ್ಕ್ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ ಆಧಾರದ ಮೇಲೆ ಈ ವಿಷಯದ ಬಗ್ಗೆ ಅಂತಿಮ ತೀರ್ಪು ನೀಡಲಾಗಿದೆ, ಈ ತೀರ್ಪಿನಿಂದಾಗಿ ಇನ್ನು ಮುಂದೆ ಕರ್ನಾಟಕವು KSRTC ಬ್ರಾಂಡ್'ನ್ನು ಬಳಕೆ ಮಾಡಬಾರದೆಂದು ಆದೇಶ ಹೊರಡಿಸಲಾಗಿದೆ. * ಈ ಹಿಂದೆ 2013ರಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯಗಳು KSRTC ವಿಸ್ತ್ರತ ರೂಪಕ್ಕಾಗಿ ಕಾನೂನು ಹೋರಾಟವನ್ನು ಆರಂಭಿಸಿದ್ದವು, ಕರ್ನಾಟಕ ರಾಜ್ಯವು 1973ರಲ್ಲಿ ಕೆಎಸ್ಆರ್ಟಿಸಿ ಎಂಬ ಹೆಸರನ್ನು ನೋಂದಣಿ ಮಾಡಿಸಿದೆ, ಆದರೆ ಕೇರಳ ರಾಜ್ಯವು ಅದಕ್ಕೂ ಮುನ್ನವೇ ಅಂದರೆ 1965ರಲ್ಲೇ ಕೆಎಸ್ಆರ್ಟಿಸಿ ಎಂಬ ಹೆಸರನ್ನು ನೋಂದಣಿ ಮಾಡಿಸಿದೆ ಈ ಅಂಶವನ್ನು ಪರಿಗಣಿಸಿ ತೀರ್ಪು ನೀಡಲಾಗಿದೆ ಎಂದು ತಿಳಿಸಿದ್ದಾರೆ.