Job Description: * ವಿಶ್ವದ ಮೊದಲ ನ್ಯಾನೊ ಯೂರಿಯಾ ಗೊಬ್ಬರವನ್ನು ಸಹಕಾರಿ ಕಂಪನಿಯಾಗಿರುವ ಇಫ್ಕೊ ಅಭಿವೃದ್ಧಿಪಡಿಸಿದೆ ಹಾಗೂ ಈ ನ್ಯಾನೊ ಯೂರಿಯಾ ಉತ್ಪಾದನೆಯು ಜೂನ್ ತಿಂಗಳಿನಿಂದ ಆರಂಭವಾಗಲಿದೆ, ಮತ್ತು ವಿಶ್ವದಾದ್ಯಂತ ರೈತರಿಗೆ ಒದಗಿಸಲಾಗುವದು ಎಂದು ತಿಳಿಸಲಾಗಿದೆ. * ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಈ ನ್ಯಾನೊ ಯೂರಿಯಾ ದ್ರವ ರೂಪದಲ್ಲಿದೆ ಲಭ್ಯವಿದೆ, ಇದು 500ಮಿಲಿಗೆ(ML) 240 ರೂ. ಆಗಿದೆ ಇದು ಯೂರಿಯಾದ ಪ್ರತಿ ಚೀಲ ಬೆಲೆಗಿಂತ ಇದು ಶೇಕಡಾ 10ರಷ್ಟು ಕಡಿಮೆಯಾಗಿದೆ. * ಪ್ರಸ್ತುತ ಗುಜರಾತ್ನ ಕಲೋಲ್ನಲ್ಲಿರುವ ಇಫ್ಕೊದ ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಈ ನ್ಯಾನೊ ಯೂರಿಯಾ ಲಿಕ್ವಿಡ್ ಅಭಿವೃದ್ಧಿಪಡಿಸಲಾಗಿದೆ, ಹಾಗೂ ಈ ನ್ಯಾನೊ ಯೂರಿಯಾವನ್ನು ಇಫ್ಕೊದ ಇ-ಕಾಮರ್ಸ್ ಪೋರ್ಟಲ್ ಮೂಲಕ ಮತ್ತು ಸಹಕಾರಿ ಮಾರಾಟ ಹಾಗೂ ಮಾರುಕಟ್ಟೆ ವ್ಯವಸ್ಥೆಗಳ ಮೂಲಕ ರೈತರು ಪಡೆಯಬಹುದಾಗಿದೆ. * ಇಫ್ಕೊ ಸಂಸ್ಥೆಯು ತನ್ನ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿಯ ಮೂಲಕ ಈ ನ್ಯಾನೊ ತಂತ್ರಜ್ಞಾನ ಆಧಾರಿತ ಯೂರಿಯಾವನ್ನ ಆರಂಭಿಸಿದೆ, ಪ್ರಸ್ತುತ ವಿಜ್ಞಾನಿ ಡಾ. ರಮೇಶ್ ರಾಲಿಯಾ ಅವರ ಹೆಸರಿನಲ್ಲಿ ಇದರ ಪೇಟೆಂಟ್ ಇದೆ, ಈ ನ್ಯಾನೋ ಯೂರಿಯಾವನ್ನು ಕಲೋಲ್ʼನ ನ್ಯಾನೋ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. * ಅಭಿವೃದ್ಧಿ ಪಡಿಸಿರುವ ಈ ನ್ಯಾನೊ ಯೂರಿಯಾ ರೈತರ ವೆಚ್ಚವನ್ನ ಕಡಿಮೆ ಮಾಡುತ್ತದೆ ಮತ್ತು ಈ ಗೊಬ್ಬರದ ಕಾರ್ಯವನ್ನು ಪರಿಶೀಲಿಸಲು ದೇಶದ 98ಕ್ಕೂ ಹೆಚ್ಚು ಬೆಳೆಗಳ ಮೇಲೆ ಸುಮಾರು 11,000 ಕೃಷಿ ವಲಯದ ಪರೀಕ್ಷೆಗಳನ್ನು ನಡೆಸಿದ್ದಾರೆ ಇದರಿಂದಾಗಿ ಬೆಳೆಗಳಲ್ಲಿ ಇಳುವರಿಯ ಸರಾಸರಿ ಶೇಕಡಾ 4ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.