Job Description: * ಜಪಾನ್ ಆರೋಗ್ಯ ಸಚಿವಾಲಯವು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಪಾನ್ ದೇಶದ 12ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಫೈಜರ್ ಲಸಿಕೆಯನ್ನು ನೀಡಲು ಅನುಮೋದನೆ ನೀಡಿದೆ. * ಈ ಹಿಂದೆ ಜಪಾನ್'ನಲ್ಲಿ 16 ವರ್ಷದ ಮೇಲ್ಪಟ್ಟ ಜನರಿಗೆ ಲಸಿಕೆ ವಿತರಣಾ ಕಾರ್ಯವು ನಡೆದಿತ್ತು ಇದೀಗ ಅಮೆರಿಕ ಮತ್ತು ಇನ್ನು ಹಲವಾರು ರಾಷ್ಟ್ರಗಳಲ್ಲಿ ಜನರಿಗೆ ಈ ಲಸಿಕೆ ನೀಡಲು ಅನುಮೋದನೆ ನೀಡಲಾಗಿದೆ ಇದನ್ನ ಅರಿತ ಜಪಾನ್ ಆರೋಗ್ಯ ಸಚಿವಾಲ ಸಮಿತಿಯು ಈ ನಿರ್ಣಯವನ್ನು ತಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. * ಜಪಾನ್ ದೇಶವು ಇಲ್ಲಿನ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಹಾಕುವ ಆಶಯವನ್ನು ವ್ಯಕ್ತ ಪಡಿಸಿದೆ ಈ ಕಾರಣದಿಂದಾಗಿ 12ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ನೊರಿಹಿಸಾ ತಮುರಾ ಅವರು ಸುದ್ದಿ ವಾಹಿನಿಗಳಿಗೆ ಮಾಹಿತಿಯನ್ನು ನೀಡಿದರು.