Job Description: * ಭಾರತೀಯ ಸೇನಾ ಸಿಬ್ಬಂದಿಗೆ ನಿಯಮಿತವಾಗಿ ಆನ್ಲೈನ್ ಮೂಲಕ ಆರೋಗ್ಯ ಸೇವೆಯನ್ನು ಒದಗಿಸಲು ಸೇಹಟ್(SeHAT)-ಒಪಿಡಿ(OPD) ವೆಬ್ಸೈಟ್'ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಣೆ ಮಾಡಿದರು. * ದೂರದ ಪ್ರದೇಶಗಳಲ್ಲಿ ಇರುವಂತಹ ಸೇನಾ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಾಗೂ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಈ ಆನ್ಲೈನ್ ಪೋರ್ಟಲ್ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ. * ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೋವಿಡ್ ಚಿಕಿತ್ಸೆಗಾಗಿ DRDO ಅಭಿವೃದ್ಧಿಪಡಿಸಿರುವ ನೀರಿನಲ್ಲಿ ಬೆರೆಸಿ ಬಾಯಿಯ ಮೂಲಕ ಸೇವೆಸಬಹುದಾದ 2DG ಗ್ಲೂಕೋಸ್ ಉತ್ತಮ ಫಲಿತಾಂಶ ನೀಡಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.