Job Description: * ಪ್ರಧಾನಿ ನರೇಂದ್ರ ಮೋದಿ ಅವರು ಯಸ್ ಚಂಡಮಾರುತದಿಂದ ಹಾನಿ ಉಂಟಾಗಿರುವ ರಾಜ್ಯಗಳಿಗೆ 1000 ಕೋಟಿ ರೂ. ತುರ್ತು ಪರಿಹಾರವನ್ನು ಘೋಷಣೆ ಮಾಡಿದ್ದಾರೆ, ಈ ತುರ್ತು ಪರಿಹಾರದಲ್ಲಿ ಒಡಿಶಾ ರಾಜ್ಯಕ್ಕೆ 500 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳಿಗೆ 500 ಕೋಟಿ ರೂ. ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಧಾನಮಂತ್ರಿ ಕಚೇರಿಯು ಪ್ರಕಟಣೆಯ ಮೂಲಕ ಮಾಹಿತಿಯನ್ನು ನೀಡಿದೆ. * ಪ್ರಧಾನಿ ನರೇಂದ್ರ ಮೋದಿ ಅವರು ಯಸ್ ಚಂಡಮಾರುತದಿಂದ ಹಾನಿಗೆ ಒಳಪಟ್ಟಿರುವ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿ ಮತ್ತೇ ಆ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ, ಇದರ ಜೊತೆಯಲ್ಲಿ ಈ ಯಶ್ ಚಂಡಮಾರುತದಿಂದಾಗಿ ಸಾವನ್ನಪ್ಪಿದ ಕುಟುಂಬದ ಸದ್ಯಸರಿಗೆ ತಲಾ 2ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನೂ ಕೂಡ ಘೋಷಣೆ ಮಾಡಿದ್ದಾರೆ. * ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಕರಾವಳಿ ತೀರದ ಪ್ರದೇಶವನ್ನು ಪ್ರವಾಹಗಳಿಂದ ಸಂರಕ್ಷಿಸಲು ಶಾಶ್ವತವಾದ ವ್ಯವಸ್ಥೆ ರೂಪಿಸಲು ಕೇಳಿಕೊಂಡಿದ್ದಾರೆ, ಸದ್ಯಕ್ಕೆ ರಾಜ್ಯವು ತನ್ನ ಆರ್ಥಿಕತೆಯ ಮೂಲಕ ಈ ಪರಿಸ್ಥಿತಿಯನ್ನು ನಿರ್ವಹಣೆ ಮಾಡುತ್ತವೆ ಎಂದು ತಿಳಿಸಿದ್ದಾರೆ.