Job Description: * ಇತ್ತೀಚಿಗೆ ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಅವರು ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಅಲ್ಲಿ ಹೊಸ ಸರ್ಕಾರ ರಚನೆ ಮಾಡಲು ಆಡಳಿತ ಮತ್ತು ಪ್ರತಿಪಕ್ಷಗಳು ವಿಫಲವಾಗಿವೆ ಈ ಕಾರಣದಿಂದಾಗಿ, ನೇಪಾಳ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿ ಅವರು ಸಂಸತ್ಅನ್ನು ವಿಸರ್ಜಿಸಿ ನವಂಬರ್ 12 ಮತ್ತು19 ರಂದು ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ. * ಪ್ರಸ್ತುತ ನೇಪಾಳ ಸರ್ಕಾರವು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣದಿಂದಾಗಿ ಕಳೆದ ಡಿಸಂಬರ್'ನಲ್ಲೆ ರಾಷ್ಟ್ರಪತಿಗಳು ಸರ್ಕಾರವನ್ನು ವಿಸರ್ಜಿಸಿದ್ದರು, ಆದರೆ ಇದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು, ಇದೀಗ ಮತ್ತೆ ಇಲ್ಲಿನ ಪಕ್ಷಗಳು ಸಂಸತ್ನಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿವೆ ಈ ಕಾರಣದಿಂದಾಗಿ ನೇಪಾಳ ಸಂಸತ್ 2ನೇ ಬಾರಿ ವಿಸರ್ಜನೆಯಾಗಿದೆ.