Job Description: * ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಯುವತಿ ಆಶ್ರಿತಾ ಅವರು ಆಯ್ಕೆಯಾಗಿದ್ದಾರೆ. * ಆಶ್ರಿತಾ ಅವರು ಭಾರತದ ಏರ್ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ನಿಂದ ಪದವಿ ಪಡೆದುಕೊಂಡಿದ್ದಾರೆ, ಹಾಗೂ ಇವರು ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿದ್ದಾರೆ, ಇವರು ವಾಯುಪಡೆಯ ಟೆಕ್ನಿಕಲ್ ವಿಭಾಗಕ್ಕೆ 2014ರಲ್ಲಿ ಆಯ್ಕೆಯಾಗಿದ್ದರು. * ವಿಶ್ವದಲ್ಲಿ 7ವಿಶ್ವವಿದ್ಯಾಲಯಗಳಲ್ಲಿ ಏರ್ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ ಇವೆ, ಇವುಗಳಲ್ಲಿ ಭಾರತ ಕೂಡ ಒಂದಾಗಿದೆ, 1976ರಲ್ಲಿ ಭಾರತದ ಏರ್ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ ಸ್ಥಾಪನೆಯಾಗಿದೆ, ಈ ಸ್ಕೂಲ್'ನಿಂದ ಇಲ್ಲಿಯವರೆಗೆ 275 ಮಂದಿ ಮಾತ್ರ ಪದವಿಯನ್ನು ಪಡೆದುಕೊಂಡಿದ್ದಾರೆ.