Job Description: * ಸುಂದರ್ಲಾಲ್ ಬಹುಗುಣ ಅವರು ಭಾರತೀಯ ಖ್ಯಾತ ಗರ್ವಾಲಿ ಪರಿಸರವಾದಿ ಮತ್ತು ಚಿಪ್ಕೊ ಚಳವಳಿಯ ನಾಯಕರಾಗಿದ್ದರು, ಪದ್ಮವಿಭೂಷಣ ಸುಂದರ್ಲಾಲ್ ಬಹುಗುಣ ಅವರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು. * ಸುಂದರ್ಲಾಲ್ ಬಹುಗುಣ ಅವರು ಜನನ: 1927ರ ಜನವರಿ 9 ರಂದು ಉತ್ತರಖಂಡ ರಾಜ್ಯದ ತೇಹ್ರಿ ಸಮಿಪದ ಮರೋಡಾದಲ್ಲಿ ಜನಿಸಿದರು. * ಸುಂದರ್ ಲಾಲ್ ಬಹುಗುಣ ಅವರು ಅಪ್ಪಟ ಪರಿಸರವಾದಿಯಾಗಿದ್ದರು ಇವರು ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದರು, ಪರಿಸರ ಸಂರಕ್ಷಣೆಗಾಗಿ 1973ರಲ್ಲಿ ನಡೆದ ಚಿಪ್ಕೋ ಚಳವಳಿಯ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. * ಪರಿಸರವಾದಿ ಬಹುಗುಣ ಅವರು ಸುಮಾರು 4,700 ಕಿ.ಮೀ. ಗಳಷ್ಟು ದೂರ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ನಡೆಸಿದರು, ಮತ್ತು ಮಂಡಲ್ ಎಂಬ ಹಳ್ಳಿಯಲ್ಲಿ 1973ರಲ್ಲಿ ಚಿಪ್ಕೋ ಚಳವಳಿಗೆ ನಾಂದಿ ಹಾಡಿದರು. * ಮಂಡಲ್ ಎಂಬ ಹಳ್ಳಿ ಜನರಿಗೆ ಕೃಷಿ ಸಲಕರಣೆಗಳ ತಯಾರಿಗಾಗಿ ಅಲ್ಲಿನ ಮುರಿದು ಬಿದ್ದ ಮರಗಳನ್ನು ಬಳಸಲು ಸರ್ಕಾರ ನಿರ್ಬಂಧ ಹೇರಿತ್ತು, ನಂತರ ಸರ್ಕಾರವು ಇದೇ ಪ್ರದೇಶದಲ್ಲಿ ಮರಗಳನ್ನು ಕಡಿಯಲು ಕ್ರೀಡಾ ಉಪಕರಣಗಳ ಕಂಪನಿಯೊಂದಕ್ಕೆ ಅನುಮತಿ ನೀಡಿತು. * ಆದರೆ ಅಲ್ಲಿನ ಸ್ಥಳೀಯ ಮಹಿಳೆಯರು ಮರಗಳ ವೃತ್ತಾಕಾರದಲ್ಲಿ ಸುತ್ತುವರೆದು ಮರಗಳನ್ನೂ ಕಡಿಯಲು ಅವಕಾಶ ನೀಡಲಿಲ್ಲ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಮರ ಕಡಿಯುವವರ ವಿರುದ್ಧ ಕ್ರಮ ಕೈಗೊಳ್ಳಲು ಸತತ ಹೋರಾಟ ನಡೆಸಿದರು, ಇದರ ಪರಿಣಾಮವಾಗಿ ಚಳವಳಿ ಬೇರೆ ಬೇರೆ ಪ್ರದೇಶಗಳಿಗೂ ಹರಡಿತು, ಅಲ್ಲಿನ ಜನರು ಕೂಡ ಜಾಗೃತರಾಗಿ ಹೋರಾಟ ನಡೆಸಲು ಸಿದ್ದರಾದರು, ಇದರ ಪರಿಣಾಮದಿಂದಾಗಿ ಸರ್ಕಾರವು 1981ರಲ್ಲಿ ಈ ಪ್ರದೇಶದಲ್ಲಿ 15 ವರ್ಷ ಯಾವುದೇ ಮರ ಕಡಿಯದಂತೆ ಕಾನೂನು ಹೊರ ಹಾಕಿತು. * ನಂತರ ಬಹುಗುಣರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿತು, ಸುಂದರ್'ಲಾಲ್ ಬಹುಗುಣ ಪ್ರಶಸ್ತಿಯನ್ನು ತಿರಸ್ಕರಿಸಿದರು, ನಂತರ 2009ರಲ್ಲಿ ಭಾರತ ಸರ್ಕಾರವು ಬಹುಗುಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು, ಮತ್ತು ಚಿಪ್ಕೋ ಚಳವಳಿಗಾಗಿ "ರೈಟ್ ಲೈವ್ಲಿ ಹುಡ್ ಅವಾರ್ಡ್" ಹಾಗೂ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಇವರಿಗೆ ಲಭಿಸಿದವು, ನಂತರ ಐಐಟಿ ರೂರ್ಕಿ ಅವರು 1989ರಲ್ಲಿ ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿಯನ್ನು ಸುಂದರ್'ಲಾಲ್ ಬಹುಗುಣ ಅವರಿಗೆ ನೀಡಿದರು.