Job Description: * ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಸರಿ ಸುಮಾರು 41 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಐಎನ್ಎಸ್ ರಜಪೂತ್ ಇದೀಗ ಇತಿಹಾಸದ ಪುಟಕ್ಕೆ ಸೇರುತ್ತಿದೆ, ಇದು ಅಧಿಕೃತವಾಗ ತನ್ನ ಸೇವೆಯನ್ನು ವೈಜಾಗ್ನಲ್ಲಿ ಕೊನೆಗೊಳಿಸಿತ್ತು, ಈ ನೌಕಾಪಡೆಯ ಐಎನ್ಎಸ್ ರಜಪೂತ್'ನ ಬೀಳ್ಕೊಡುಗೆ ಸಮಾರಂಭವು ಕರೊನಾ ಕಾರಣದಿಂದಾಗಿ ಸರಳವಾಗಿ ನೆರೆವೇರಿದ್ದು ಈ ಸರಳ ಸಮಾರಂಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು. * ಈ ಐಎನ್ಎಸ್ ರಜಪೂತ್ 1980ರ ಮೇ. 4ರಂದು ತನ್ನ ಕಾರ್ಯಾವನ್ನು ಆರಂಭಿಸಿತ್ತು, ಈ ರಜಪೂತ್ ಹಡಗನ್ನು ನಿಕೋಲೇವ್ ಶಿಪ್ಯಾರ್ಡ್ನಲ್ಲಿ ನಿರ್ಮಾಣಮಾಡಲಾಗಿತ್ತು ಇದರ ಮೂಲ ಹೆಸರು ನದೇಝುನಿ, ಇದು ಕ್ಷಿಪಣಿ ಧ್ವಂಸಕ್ಕೆ ಪ್ರಮುಖವಾದ ಹಡಗೆಂದು ಸುಮಾರು 4 ದಶಕಗಳಿಂದ ಪ್ರಖ್ಯಾತಿಯನ್ನು ಪಡೆದಿತ್ತು. * ಗುಲಾಬ್ ಮೋಹನ್ಲಾಲ್ ಹಿರಂದಾನಿ ಅವರು ಈ ರಜಪೂತ್'ನ ಮೊದಲ ಕಮಾಂಡಿಂಗ್ ಆಫೀಸರ ಆಗಿದ್ದರು. * ಈ ರಜಪೂತ್ ಹಡಗಿನಿಂದ 2005ರಲ್ಲಿ ಧನುಷ್ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು, ಮತ್ತೇ 2007ರ ಮಾರ್ಚ್ತ ತಿಂಗಳಿನಲ್ಲಿ ರಜಪೂತ್ ಹಡಗಿಮೂಲಕ ಪೃಥ್ವಿ-3 ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. - ಭಾರತೀಯ ನೌಕಾಪಡೆಯ ಐಎನ್ಎಸ್ ರಜಪೂತ್'ನ ಪ್ರಮುಖ ಆಪರೇಷನ್'ಗಳು ಇಂತಿವೆ: * ಈ ಐಎನ್ಎಸ್ ರಜಪೂತ್ ಶ್ರೀಲಂಕಾದ ಆಪರೇಷನ್ ಅಮನ್, ಆಪರೇಷನ್ ಪವಾನ್, ಮಾಲ್ಡೀವ್ಸ್ನಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನಡೆಸಲಾದ ಆಪರೇಷನ್ ಕಾಕ್ಟಸ್, ಲಕ್ಷದ್ವೀಪದಲ್ಲಿ ನಡೆಸಿದ ಆಪರೇಷನ್ ಕ್ರೌನ್ ನೆಸ್ಟ್ನಲ್ಲಿ ರಜಪೂತ್ ಹಡಗು ತನ್ನ ಅಪಾರವಾದ ಸೇವೆ ಸಲ್ಲಿಸಿದೆ ಇದರ ಕಾರ್ಯವನ್ನು ಭಾರತವು ಎಂದು ಮರೆಯುವದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.