Job Description: * ಚೀನಾ ದೇಶದ ಬೈಟ್ಡಾನ್ಸ್ ಕಂಪನಿಯ ಸಹಸಂಸ್ಥಾಪಕ ಝಾಂಗ್ ಯಿಮಿಂಗ್ ಅವರು CEO ಸ್ಥಾನದಿಂದ ಕೆಳಗಿಳಿಯವ ತೀರ್ಮಾನವನ್ನು ಪ್ರಕಟಿಸಿದ್ದಾರೆ, ಇದು ಚೀನಾದ ತಂತ್ರಜ್ಞಾನ ಕ್ಷೇತ್ರದ ಕಂಪನಿಯಾಗಿದೆ. * ಝಾಂಗ್ ಯಿಮಿಂಗ್ ಅವರು ಪ್ರಸ್ತುತ ಚೀನಾ ದೇಶದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದಾರೆ, ಈ ಬೈಟ್ಡಾನ್ಸ್ ಕಂಪನಿಗೆ ವಿಶ್ವದ ಅತಿದೊಡ್ಡ ಯೂನಿಕಾರ್ನ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ, ಈ ಕಂಪನಿಯು ಕಿರು (ಸಣ್ಣ) ವಿಡಿಯೊಗಳನ್ನು ಹಂಚಿಕೊಳ್ಳುವ ಜನಪ್ರಿಯತೇ ಪಡೆದಿದ್ದ ಟಿಕ್ಟಾಕ್ ಆಪ್'ನ್ನು ಅಭಿವೃದ್ಧಿ ಪಡಿಸಿದೆ, ಈ ಟಿಕ್ಟಾಕ್ ಆಪ್'ನ್ನು ಭಾರತದಲ್ಲಿನ ಬಳಕೆಗೆ ನಿಷೇಧ ಹೇರಲಾಗಿದೆ. * ಈ ಹಿಂದಿನ ವರ್ಷವೇ ಚೀನಾದ ಅಲಿಬಾಬಾ ಕಂಪನಿಯ ಸಂಸ್ಥಾಪಕ ಜಾಕ್ ಮಾ ಅವರು ಕಂಪನಿಯ ಉನ್ನತ ಹುದ್ದೆಯನ್ನು ತೊರೆದಿದ್ದರು. * ಲಿಯಾಂಗ್ ರುಬೊ ಅವರು ಬೈಟ್ಡಾನ್ಸ್ ಕಂಪನಿಯ ಸಿಇಓ ಸ್ಥಾನಕ್ಕೆ ಏರಲಿದ್ದಾರೆ.