Job Description: * ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವು ಪಂಜಾಬ್'ನ ಮೊಗಾ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ, ಈ ಯುದ್ಧ ವಿಮಾನವು ಪ್ರತಿದಿನದ ತರಬೇತಿಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ಭಾರತೀಯ ವಾಯುಪಡೆಯ ಈ ಬಿಸನ್ ಯುದ್ಧ ವಿಮಾನವನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ ಪೈಲಟ್ ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಅವರು ಸಾವನ್ನಪಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ ಮತ್ತು ಭಾರತೀಯ ವಾಯುಪಡೆ ಈ ಅಪಘಾತದ ಕಾರಣ ತಿಳಿಯಲು ನ್ಯಾಯಾಂಗ ತನಿಖೆಗೆ ಆದೇಶವನ್ನು ನೀಡಿದೆ ಎನ್ನಲಾಗಿದೆ.