Job Description: * ಪ್ರಸ್ತುತ ವಿಶ್ವವ್ಯಾಪಿಯಾಗಿ ಹರಡಿರುವ ಕೊರೊನಾ ಸೋಂಕಿನ ಕಾರಣದಿಂದಾಗಿ ಇದೆ ಜೂನ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ರದ್ದುಗೊಂಡಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಈ ಹಿಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಪಂದ್ಯಾವಳಿವು ಕೂಡ ಕೋರೋಣ ಸೋಕಿನ ಕಾರಣ ಮುಂದೂಡಲಾಗಿತ್ತು. * ಪ್ರಸ್ತುತ ಈ ವರ್ಷದ ಏಷ್ಯಾ ಕಪ್'ನ್ನು ಕೋರೋಣ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆಯೋಜಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಆಶ್ಲೇ ಡಿ ಸಿಲ್ವಾ ಅವರು ತಿಳಿಸಿದ್ದಾರೆ, ಜೊತೆಗೆ ಮುಂಬರುವ 2 ವರ್ಷಗಳವರೆಗೆ ಪಂದ್ಯಾವಳಿಗಳನ್ನ ಆಯೋಜಿಸಲಾಗುವದಿಲ್ಲ ಎಂದು ತಿಳಿಸಿದ್ದಾರೆ, ಸದ್ಯದಲ್ಲಿ ಏಷ್ಯಾ ಕ್ರಿಕೆಟ್ ಅಸೋಸಿಯೇಷನ್ ಪ್ರಕಟಣೆಯನ್ನು ತಿಳಿಸಲಿದೆ ಎಂದು ಡಿ'ಸಿಲ್ವಾ ಅವರು ಹೇಳಿದರು.