Job Description: * ಶಿವಸುಂದರ್ ದಾಸ್ ಅವರು ಭಾರತದ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರರಾಗಿದ್ದರು, ಪ್ರಸ್ತುತ ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ, ಇವರು ಈ ಮುಂದೆ ಬರುವ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದಾರೆ. * ಭಾರತದ ಪರವಾಗಿ ಶಿವಸುಂದರ್ ದಾಸ್ ಅವರು 23 ಟೆಸ್ಟ್ ಪಂದ್ಯಗಳಲ್ಲಿ ಆಟವಾಡಿದ್ದಾರೆ ಮತ್ತು ಟೆಸ್ಟ್ ಮಾದರಿಯಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. * ಈ ಹಿಂದೆ ಭಾರತ ಮಹಿಳಾ ತಂಡಕ್ಕೆ ವಿವಿ ರಾಮನ್ ಅವರು ಕೋಚ್ ಆಗಿದ್ದರು, ಇವರು ಕೋಚ್ ಆಗಿರುವ ಸಂಧರ್ಭದಲ್ಲಿ ಭಾರತೀಯ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತ ಕಾರಣದಿಂದಾಗಿ ಇವರನ್ನು ಈ ಹುದ್ದೆಯಿಂದ ತಗೆದಿದ್ದಾರೆ, ಇದೀಗ ಮಹಿಳಾ ತಂಡಕ್ಕೆ ರಮೇಶ್ ಪೊವಾರ್ ಅವರನ್ನು ಮುಖ್ಯ ಕೋಚ್'ಆಗಿ ನೇಮಕ ಮಾಡಲಾಗಿದೆ. * ಭಾರತ ಮಹಿಳಾ ತಂಡ ಇಂಗ್ಲೆಂಡ್ ನಲ್ಲಿ ಒಂದು ಟೆಸ್ಟ್ ಪಂದ್ಯ ಮತ್ತು ಮೂರು ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಲಿದ್ದಾರೆ.