Job Description: * ಇತ್ತೀಚಿಗೆ ದೇಶ್ಯಾದ್ಯಂತ ಕೋವಿಡ್-19 2ನೇ ಅಲೇ ಅತೀ ಹೆಚ್ಚಾಗಿ ಹರಡಿದೆ ಇದರ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ, ಈ ಪ್ಯಾಕೇಜ್'ನಲ್ಲಿ ದೆಹಲಿಯ ಎಲ್ಲ ಜನರಿಗೆ 10 ಕೆಜಿ ಅಕ್ಕಿ, ಮತ್ತು ಕೋವಿಡ್'ನಿಂದ ಮೃತರಾದ ಕುಟುಂಬಕ್ಕೆ 50 ಸಾವಿರ ರೂ. ನೀಡುವದಾಗಿ ಘೋಷಣೆ ಮಾಡಿದ್ದಾರೆ. * ಕೋವಿಡ್'ನಿಂದ ಮೃತರ ಕುಟುಂಬದ ಮಕ್ಕಳಿಗೆ ಪ್ರತಿ ತಿಂಗಳಿಗೆ 2500 ರೂಪಾಯಿ ಪಿಂಚಣಿ ಸೌಲಭ್ಯ ನೀಡುತ್ತದೆ ಮತ್ತು ತಂದೆ, ತಾಯಿಯನ್ನು ಮತ್ತು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 25 ವರ್ಷದವರೆಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ ಎಂದು ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. * ಈ ಕೋರೋಣ ಸಂಕಷ್ಟದ ಪರಿಸ್ಥಿತಿಯಲ್ಲಿ ಪಡಿತರ ಚೀಟಿ ಇಲ್ಲದೆ ಇರುವ ಬಡ ಜನರಿಗೂ ದೆಹಲಿ ಸರ್ಕಾರವು ಪಡಿತರವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ, ಅವರು ಯಾವುದೇ ರೀತಿಯ ಧಾಖಲೆಗಳನ್ನೂ ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.