Job Description: * ಪಂಜಾಬ್'ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಯಾವ ಗ್ರಾಮಗಳು ಶೇಕಡ 100ರಷ್ಟು ಲಸಿಕೆ ಗುರಿ ಸಾಧಿಸುತ್ತವೆ ಅಂತಹ ಗ್ರಾಮಗಳಿಗೆ 10 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. * ವ್ಯಾಕ್ಸಿನೇಷನ್ ಡ್ರೈವ್ ಮುನ್ನಡೆಸುವಂತೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು 4 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ವರ್ಚುಯಲ್ ಮೂಲಕ ಹಳ್ಳಿಗಳ ಸದಸ್ಯರೊಂದಿಗೆ ಸಂವಾದ ನಡೆಸಿ ಅವರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. * ಪ್ರಸ್ತುತ ಗ್ರಾಮಗಳಲ್ಲಿನ ಜನರು ಕೊರೊನಾ ವೈರಸ್'ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಪಂಚಾಯಿತಿ ನಿಧಿಯಿಂದ ಪ್ರತಿ ದಿನಕ್ಕೆ 5000 ರೂ. ಉಪಯೋಗಿಸಲು ಅವಕಾಶವನ್ನು ನೀಡಿದ್ದಾರೆ, ಮತ್ತು ಜನರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೋರಿದ್ದಾರೆ.