Job Description: * ಭಾರತದಲ್ಲಿ ಕೊರೊನಾ ವೈರಸ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ಪ್ರಸ್ತುತ ಭಾರತ ದೇಶಕ್ಕೆ ಸಹಾಯ ಮಾಡಲು ಇಟಲಿ ದೇಶವು ತಜ್ಞರ ತಂಡ ಮತ್ತು ಆಮ್ಲಜನಕ ಉತ್ಪಾದನಾ ಘಟಕ ಹಾಗೂ 20 ವೆಂಟಿಲೇಟರ್'ನ್ನು ಭಾರತಕ್ಕೆ ನೀಡಿದೆ. * ಇಟಲಿಯ ವಾಯುಪಡೆ ಸಿ-130 ವಿಮಾನವು ವೈದ್ಯಕೀಯ ಉಪಕರಣ ಮತ್ತು ತಜ್ಞರ ತಂಡವು ದೆಹಲಿಗೆ ಬಂದಿದೆ, ಭಾರತದಲ್ಲಿರುವ ಇಟಲಿಯ ರಾಯಭಾರಿ ವಿನ್ಸೆಂಜೋ ಡಿ ಲೂಕಾ ಅವರು ಭಾರತದ ರಾಯಭಾರಿ ಉಗೊ ಅಸ್ತುಟೊ ಜೊತೆಯಾಗಿ ಸ್ವಾಗತ ಮಾಡಿಕೊಂಡರು. * ಪ್ರಸ್ತುತ ಭಾರತ ದೇಶಕ್ಕೆ ಸಹಾಯ ನೀಡಲು ಮುಂದಾಗಿರುವ ಹಲವು ಪ್ರಮುಖ ದೇಶಗಳು ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಐರ್ಲೆಂಡ್, ಬೆಲ್ಜಿಯಂ, ಪೋರ್ಚುಗಲ್, ರೊಮೇನಿಯಾ, ಲಕ್ಸೆಂಬರ್ಗ್, ಸಿಂಗಾಪುರ್, ಸ್ವೀಡನ್, ಕುವೈತ್ ಈ ಎಲ್ಲ ದೇಶಗಳು ಭಾರತಕ್ಕೆ ಸಹಾಯಸ್ತ ನೀಡಿವೆ.