Job Description: * ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 17ರಂದು ಒಂದು ಲೋಕಸಭೆ ಬೆಳಗಾವಿ ಹಾಗೂ ಎರಡು ವಿಧಾನಸಭೆ ಬಸವಕಲ್ಯಾಣ, ಮಸ್ಕಿ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಸಲಾಯಿತು, ಇದೀಗ ಈ 3 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. * ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಂಗಳ ಅಂಗಡಿಯವರು ಜಯ ಗಳಿಸಿದ್ದಾರೆ, ಪ್ರಸ್ತುತ ಬೆಳಗಾವಿ ಲೋಕಸಭಾ ಕ್ಷೇತ್ರ: 54.73% ಮತದಾನ ದಾಖಲಾಗಿದೆ. * ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಶರಣು ಸಲಗರ ಅವರು ಜಯ ಗಳಿಸಿದ್ದಾರೆ, ಕ್ಷೇತ್ರ: 59.57% ಮತದಾನ ದಾಖಲಾಗಿದೆ. * ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಸನಗೌಡ ತುರವಿಹಾಳ್ ಗೆಲುವು ಸಾಧಿಸಿದ್ದಾರೆ, ಕ್ಷೇತ್ರ: 70. 48% ಮತದಾನ ದಾಖಲಾಗಿದೆ. ಲೋಕಸಭೆ ಬಗ್ಗೆ ಮಾಹಿತಿ : * ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ಇನ್ನೊಂದು ರಾಜ್ಯಸಭೆ), ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. * ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ. * ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. * ಲೋಕಸಭೆಯನ್ನು ಕೆಳಮನೆ (ಭಾರತದ ಸಂಸತ್) ಎಂದು ಕರೆಯಲಾಗುತ್ತದೆ. * ಅಧಿಕಾರಾವಧಿಯ ಮಿತಿಗಳು 5 ವರ್ಷಗಳು * ಪ್ರಸ್ತುತ ಸ್ಪೀಕರ್: ಓಂ ಬಿರ್ಲಾ, ಭಾರತೀಯ ಜನತಾ ಪಕ್ಷ 19 ಜೂನ್ 2019 * ಕಾರ್ಯದರ್ಶಿ: ಸ್ನೇಹಲತಾ ಶ್ರೀವಾಸ್ತವ 1 ಡಿಸೆಂಬರ್ 2017 * ಆಡಳಿತ ಪಕ್ಷದ ನಾಯಕ : ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷ 26 ಮೇ 2014