Job Description: * ಪಂಚರಾಜ್ಯಗಳ ಅಂದರೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದಿಚೇರಿ, ಪ್ರಸ್ತುತ ಈ 5 ರಾಜ್ಯಗಳ ಚುನಾವಣಾ ಫಲಿತಾಂಶ ಇದೀಗ ಪ್ರಕಟವಾಗಿದೆ. * ಪಶ್ಚಿಮ ಬಂಗಾಳ: ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರ TMC ಪಕ್ಷವು ಗೆಲುವು ಸಾಧಿಸಿದೆ ಮತ್ತು ಬಲಿಷ್ಠ ನಾಯಕಿಯಾಗಿ ಹೊರಹೊಮ್ಮಿದ್ದಾರೆ. * ಇದೇ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಪಕ್ಷವು 80 ಕ್ಷೇತ್ರ ಗೆದ್ದುಕೊಂಡಿದೆ. * ತಮಿಳುನಾಡು: ರಾಜ್ಯದಲ್ಲಿ ಇದೀಗ 2021ರ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ದಿಗ್ವಿಜಯ ಸಾಧಿಸಿದೆ. * ತಮಿಳುನಾಡು ರಾಜ್ಯದಲ್ಲಿ ಎಂ.ಕೆ. ಸ್ಟಾಲಿನ್ ಅವರು ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ. * ಅಸ್ಸಾಂ: ರಾಜ್ಯದಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಿದೆ, ಬಿಜೆಪಿ ನಾಯಕ ಸಿಎಂ ಸರ್ಬಾನಂದ ಸೋನೊವಾಲ್ ಮತ್ತು ಜನಪ್ರಿಯ ನಾಯಕ ಹಿಮಾಂತ ಬಿಸ್ವಾ ಶರ್ಮರನ್ನೇ ಅಸ್ಸಾಂ ಜನತೆ ನೆಚ್ಚಿಕೊಂಡಿದ್ದಾರೆ. * ಹಿಮಾಂತ ಬಿಸ್ವಾ ಶರ್ಮ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಈ ಹಿಂದೆಯೇ ಘೋಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. * ಕೇರಳ: ರಾಜ್ಯವು ದೇವರ ನಾಡು ಎಂದು ಪ್ರಖ್ಯಾತಿ ಪಡೆದಿದೆ, ಸತತವಾಗಿ 2ನೇ ಬಾರಿ ಅಧಿಕಾರವನ್ನು ಎಲ್ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಪಕ್ಷವು ಪಡೆದುಕೊಂಡಿದೆ. * ಕೇರಳ ರಾಜ್ಯದಲ್ಲಿ ಸಿಎಂ ಪಿಣರಾಯಿ ವಿಜಯನ್'ರವರು ಮತ್ತೆ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ. * ಪುದುಚೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಿದೆ.