Job Description: * ಪ್ರಸ್ತುತ ಭಾರತ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವದರಿಂದಾಗಿ ಕೇಂದ್ರ ಸರ್ಕಾರವು ವಿದೇಶಗಳಿಂದ ಜೀವರಕ್ಷಕ ವಾಗಿರುವ ರೆಮಿಡಿಸಿವರ್'ನ 4.5 ಲಕ್ಷ ಚುಚ್ಚುಮದ್ದುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ ಎಂದು ರಸಗೊಬ್ಬರ ಸಚಿವಾಲಯ ಮಾಹಿತಿ ನೀಡಿದೆ. * ಸರ್ಕಾರಿ ಸಾಮ್ಯದ ಹೆಚ್ಎಲ್ಎಲ್ ಲೈಫ್ಕೇರ್ ಸಂಸ್ಥೆಯು ಅಮೆರಿಕಾದ ಗಿಲೇಡ್ ಸೈನ್ಸ್ ಸಂಸ್ಥೆ ಹಾಗೂ ಈಜಿಪ್ಟಿಯನ್ ಫಾರ್ಮಾ ಸಂಸ್ಥೆಗಳಿಂದ 4.5 ಲಕ್ಷ ರೆಮಿಡಿಸಿವರ್ ವಯಲ್ಗಳನ್ನು ಆಮದು ಮಾಡಿಕೊಳ್ಳುಲಾಗುತ್ತಿದೆ. * ಪ್ರಸ್ತುತ ಅಮೆರಿಕಾದ ಗಿಲೇಡ್ ಸೈನ್ಸ್ ಸಂಸ್ಥೆ ಕೆಲವೇ ದಿನಗಳಲ್ಲಿ 75 ಸಾವಿರ ದಿಂದ 1ಲಕ್ಷದಷ್ಟು ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ಭಾರತಕ್ಕೆ ಸಾಗಿಸಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ. * ಈಜಿಪ್ಟಿಯನ್ ಫಾರ್ಮಾ ಸಂಸ್ಥೆಯಿಂದ 15 ದಿನಕೊಮ್ಮೆ 50 ಸಾವಿರ ವಯಲ್ಗಳನ್ನು ನೀಡಲು ಒಪ್ಪಿಗೆಯನ್ನು ನೀಡಿದೆ.