Job Description: * ಭಾರತೀಯ ಸೇನೆಯು ಲಡಾಖ್'ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ನೀಡುವ ಸಲುವಾಗಿ ಇಗ್ನಿಟೆಡ್ ಮೈಂಡ್ಸ್ ಯೋಜನೆಯನ್ನು ಆರಂಭಿಸಿದೆ. * ಭಾರತೀಯ ಸೇನೆಯು ಪ್ರಾರಂಭಿಸಿರುವ ಈ ಯೋಜನೆಗೆ HPCL (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್) ಹಾಗೂ ಕಾನ್ಪುರ ಮೂಲದ NGO ರಾಷ್ಟ್ರೀಯ ಸಮಗ್ರತೆ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಗಳು ಈ ಯೋಜನನೆಯ ಒಪ್ಪಂದಕ್ಕೆ ಲೇಹ್ನಲ್ಲಿ ಸಹಿ ಹಾಕಿವೆ ಎಂದು ತಿಳಿದು ಬಂದಿದೆ. * ಭಾರತೀಯ ಸೇನೆಯು ಆರಂಭಿಸಿರುವ ಯೋಜನೆಯಿಂದಾಗಿ ಕಾರ್ಗಿಲ್ ಹಾಗೂ ಲೇಹ್ ಜಿಲ್ಲೆಗಳ 45 ವಿದ್ಯಾರ್ಥಿಗಳಿಗೆ JEE ಮತ್ತು NEET ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಿದೆ. * ಲಡಾಕ್ನಲ್ಲಿ ಮೊದಲ ಭೂಶಾಖದ ವಿದ್ಯುತ್ ಯೋಜನೆಯನ್ನು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಸ್ಥಾಪನೆ ಮಾಡಲಿದೆ. * ಲಡಾಖ್'ಅನ್ನು ಲಾಮಾ ಲ್ಯಾಂಡ್ ಅಥವಾ ಲಿಟಲ್ ಟಿಬೆಟ್ ಎಂದು ಕರೆಯಲಾಗುತ್ತದೆ. * ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದಂತೆ ಲಡಾಖ್'ನಲ್ಲಿ ಹೆಚ್ಚಿನ ಸೌರ ವಿಕಿರಣ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉತ್ಪಾದಿಸಲು ಉತ್ತಮವಾದ ಪ್ರದೇಶವಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ಬಗ್ಗೆ ಮಾಹಿತಿ : * ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಂಗಸಂಸ್ಥೆಯಾಗಿದ್ದು, ಇದರ ಪ್ರಧಾನ ಕಚೇರಿ ಮಹಾರಾಷ್ಟ್ರದ ಮುಂಬೈನಲ್ಲಿದೆ. ಇದು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಭಾರತದಲ್ಲಿ 25% ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಬಲವಾದ ಮಾರುಕಟ್ಟೆ ಮೂಲಸೌಕರ್ಯವನ್ನು ಹೊಂದಿದೆ. * ಷೇರು ಬೆಲೆ: HINDPETRO (NSE) ₹ 233.10 +0.60 (+ 0.26%) * ಪ್ರಧಾನ ಕಚೇರಿ: ಮುಂಬೈ * ಸಿಇಒ: ಮುಖೇಶ್ ಕುಮಾರ್ ಸುರಾನಾ (1 ಎಪ್ರಿಲ್ 2016) * ಅಧ್ಯಕ್ಷರು: ಮುಖೇಶ್ ಕುಮಾರ್ ಸುರಾನಾ * ಪೋಷಕ ಸಂಸ್ಥೆ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ * ಅಂಗಸಂಸ್ಥೆಗಳು: ಎಚ್ಪಿಸಿಎಲ್ ಜೈವಿಕ ಇಂಧನ ಲಿಮಿಟೆಡ್