Job Description: * 1993 ರಿಂದ ವಿಶ್ವ ಹವಾಮಾನ ಸಂಸ್ಥೆಯು “ಸ್ಟೇಟ್ ಆಫ್ ದಿ ಗ್ಲೋಬಲ್ ಕ್ಲೈಮೇಟ್ 2020” ವರದಿಯನ್ನು ಪ್ರಕಟಿಸುತ್ತ ಬಂದಿದ್ದು, 2011-2020 ದಾಖಲೆಯ ಅತ್ಯಂತ ಬೆಚ್ಚಗಿನ ದಶಕಗಳಾಗಿವೆ, ಉತ್ತರ ಹಿಂದೂ ಮಹಾಸಾಗರದಲ್ಲಿ ಅತ್ಯಂತ ದುಬಾರಿ ಉಷ್ಣವಲಯ ದಾಖಲಾಗಿದೆ. ಇದಕ್ಕೆ ಮುಖ್ಯ ಕಾರಣ ಇಂಫಾನ್ ಚಂಡಮಾರುತ ಎನ್ನಲಾಗಿದೆ. ಈ ಚಂಡಮಾರುತವು ಮೇ. 2020ರಲ್ಲಿ ಭಾರತ-ಬಾಂಗ್ಲಾದೇಶದ ಗಡಿಯ ಸಮೀಪ ಭೂಕುಸಿತವನ್ನು ಉಂಟುಮಾಡಿದಲ್ಲದೆ, ಇದರಿಂದ ಭಾರತದಲ್ಲಿನ ಸುಮಾರು 14 ಬಿಲಿಯನ್ USD ನಷ್ಟು ಆರ್ಥಿಕ ನಷ್ಟ ಆಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ವರದಿಯನ್ನು ನೀಡಿದೆ. * 2020ರ ಕೈಗಾರಿಕಾ ಮಟ್ಟಕ್ಕೆ ಹೋಲಿಸಿದರೆ ಜಾಗತಿಕ ಸರಾಸರಿ ತಾಪಮಾನವು 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. * ಭಾರತವು 1994 ರಿಂದ 2 ತೇವವಾದ ಮಾನ್ಸೂನ್ ಋತುಗಳಲ್ಲಿ ಒಂದಾಗಿದೆ, ಜೂನ್ ಮತ್ತು ಸೆಪ್ಟೆಂಬರ್'ನ ಮಳೆ ಸರಾಸರಿಗಿಂತ 9% ಹೆಚ್ಚಾಗಿದೆ ಇದರಿಂದ ಪ್ರವಾಹ, ಭೂಕುಸಿತ ಮತ್ತು ಮಳೆಯಿಂದಾಗಿ ಸರಿ ಸುಮಾರು 2,000 ಸಾವುಗಳು ನೋವುಗಳು ಸಂಭವಿಸಿವೆ. * ಇಂಗಾಲದ ಡೈಆಕ್ಸೈಡ್ ಸಾಂದ್ರತೆಯು ಪ್ರತಿ ಮಿಲಿಯನ್ಗೆ 410 ಭಾಗಗಳನ್ನು ಮೀರಿದೆ ಮತ್ತು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 148% ಹೆಚ್ಚಾಗಿದೆ ಎಂದು ತಿಳಿಸಿದೆ. * ಹವಾಮಾನ ಆಕ್ಷನ್ ಟ್ರ್ಯಾಕರ್ ಪ್ರಕಾರ ಪ್ಯಾರಿಸ್ ಒಪ್ಪಂದಕ್ಕೆ ಭಾರತ, ಭೂತಾನ್, ಕೋಸ್ಟರಿಕಾ ಮತ್ತು ಫಿಲಿಪೈನ್ಸ್ ದೇಶಗಳು ಬದ್ಧವಾಗಿವೆ. * ವಿಶ್ವಸಂಸ್ಥೆಯ 2050ರ ವೇಳೆಗೆ ದೇಶಗಳು ನಿವ್ವಳ ಶೂನ್ಯ ಹೊರಸೂಸುವಿಕೆಗೆ ಬದ್ಧರಾಗಿರಬೇಕು ಎಂದು ಎಚ್ಚರಿಕೆಯನ್ನು ನೀಡಿದೆ.