Job Description: * ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ 2ನೇ ಅಲೆ ಹೆಚ್ಚುತ್ತಿರುವ ಕಾರಣದಿಂದಾಗಿ ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಬೇಡಿಕೆ ಹೆಚ್ಚಾಗಿದೆ ಈ ಬೇಡಿಕೆಯನ್ನು ಸರಿದೂಗಿಸಲೂ ಭಾರತೀಯ ರೈಲ್ವೆ ಇಲಾಖೆಯು ಮಹಾರಾಷ್ಟ್ರ ಸರ್ಕಾರದ ಮನವಿಯ ಮೇರೆಗೆ ರೈಲ್ವೆ ಕ್ರಯೋಜೆನಿಕ್ ಟ್ಯಾಂಕರ್'ಗಳಲ್ಲಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಬೇಡಿಕೆ ಇರುವ ಆಸ್ಪತ್ರೆಗಳಿಗೆ ರವಾನಿಸಲು ರೈಲ್ವೆ ಇಲಾಖೆಯು ಒಪ್ಪಿಗೆಯನ್ನು ನೀಡಿದೆ. * ರೋಲ್ ಆನ್-ರೋಲ್ (ರೋ-ರೋ) ಸೇವೆಯಲ್ಲಿ ಲೋಡ್ ಮಾಡ ಬೇಕಾಗಿರುವ ದ್ರವ ಆಮ್ಲಜನಕ ಟ್ರಕ್ಗಳ ಜೊತೆಯಲ್ಲಿರುವ ಸಿಬ್ಬಂದಿಗೆ ಪ್ರಯಾಣಕ್ಕಾಗಿ ಎರಡನೆ ದರ್ಜೆಯ ಟಿಕೆಟ್ ನೀಡಲಾಗುವದು ಮತ್ತು ಟ್ರಕ್ನ ಜೊತೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವದು ಎಂದು ರೈಲ್ವೆ ಇಲಾಖೆಯು ತಿಳಿಸಿದೆ.