Job Description: * ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತ ದೇಶದಲ್ಲಿ ಇಲ್ಲಿಯತನಕ 9 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್'ಗಳನ್ನು ನೀಡಲಾಗಿದೆ ಎಂದು ತಿಳಿಸಿದೆ. * ಇಲ್ಲಿಯವರೆಗೆ ಒಟ್ಟು 13,77,304 ಕೇಂದ್ರಗಳ ಮೂಲಕ 9,01,98,673 ಲಸಿಕೆ ಡೋಸ್'ಗಳನ್ನು ನೀಡಲಾಗಿದೆ. * ಶೇ 9.92 ರಷ್ಟು ಲಸಿಕೆಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. * ಭಾರತದಲ್ಲಿ ದಿನಕ್ಕೆ ಸರಾಸರಿ 34,30,502 ಡೋಸ್ ಲಸಿಕೆ ನೀಡಲಾಗುತ್ತಿದೆ. * ಭಾರತವು ಪ್ರತಿದಿನ ಲಸಿಕೆ ನೀಡುತ್ತಿರುವ ಸಂಖ್ಯೆಯಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.