Job Description: * ವಾಣಿಜ್ಯ ವಾಹನಗಳ ವಾಹನ ಚಾಲನಾ ಪರವಾನಿಗೆ ಪತ್ರ ಪಡೆಯಲು ಇನ್ನು ಯಾವುದೇ ಶೈಕ್ಷಣಿಕ ವಿದ್ಯಾರ್ಹತೆಯು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚಿಗೆ ನಿರ್ಧರಿಸಿದೆ. ಮತ್ತು ಇದನ್ನು 'ಕನಿಷ್ಠ ತರಬೇತಿ ಮತ್ತು ಭಾಷಾ ಗ್ರಹಿಕೆಯ' ಜ್ಞಾನದ ಕಡ್ಡಾಯ ಅವಶ್ಯಕತೆಯೊಂದಿಗೆ ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ. * ಇನ್ನು ರಾಜ್ಯ ಸಾರಿಗೆ ಇಲಾಖೆಗಳು ಇನ್ನು ಮುಂದೆ ಕೇಂದ್ರ ಮೋಟಾರು ವಾಹನ ನಿಯಮಗಳ ಪ್ರಕಾರ ಸಂಚಾರ ನಿಯಮ ಉಲ್ಲಂಘಿಸಿದವರ (ವೇಗದ ಚಲನೆ, ರೇಸಿಂಗ್, ಅಪಾಯಕಾರಿ ಚಾಲನೆ ಮತ್ತು ಹೆಲ್ಮೆಟ್ ಧರಿಸದಿರುವುದು) ವಂತಹ ಹೆಸರುಗಳನ್ನು ಪ್ರದರ್ಶನ ಮಾಡಲು ಸೂಚಿಸಿದೆ.