Job Description: * 2021ರ ವಿಶ್ವ ಆರ್ಥಿಕ ವೇದಿಕೆ ಗ್ಲೋಬಲ್ ಜೆಂಡರ್(Gender) ಗ್ಯಾಪ್ ರಿಪೋರ್ಟ್ಅನ್ನು ಬಿಡುಗಡೆ ಮಾಡಿದೆ, ಭಾರತವು ಸೂಚ್ಯಂಕದ ಶ್ರೇಯಾಂಕದ 28 ಸ್ಥಾನಗಳಿಂದ ಕೆಳಗೆ ಇಳಿಸಿದೆ ಎಂದು ತಿಳಿಸಿದೆ. * ಪ್ರಸ್ತುತ ಜೆಂಡರ್(Gender) ಸೂಚ್ಯಂಕದ 156 ದೇಶಗಳಲ್ಲಿ ಭಾರತವು 140ನೇ ಸ್ಥಾನ ಪಡೆದಿದೆ. * ಈ ಹಿಂದೆ 2020ರಲ್ಲಿ ಭಾರತವು 153 ದೇಶಗಳ ಪೈಕಿ 112ನೇ ಸ್ಥಾನ ಪಡೆದುಕೊಂಡಿತ್ತು. * ಜೆಂಡರ್(Gender) ಸೂಚ್ಯಂಕದ ಪ್ರಕಾರ ಭಾರತವು ತನ್ನ ಲಿಂಗ ಅಂತರದ 62.5% ಅನ್ನು ಇಲ್ಲಿಯವರೆಗೆ ಮುಚ್ಚಿಇಟ್ಟಿತ್ತು ಎನ್ನಲಾಗಿದೆ. * ಭಾರತದಲ್ಲಿ ಮಹಿಳೆಯರು ಗಳಿಸಿದ ಆದಾಯವು ಪುರುಷರು ಗಳಿಸಿದ 1/5 ರಷ್ಟು ಮಾತ್ರ ಇದೆ, ಮತ್ತು ಈ ಸೂಚ್ಯಂಕದಲ್ಲಿ ಜಾಗತಿಕವಾಗಿ ಭಾರತವು 10ನೇ ಸ್ಥಾನದಲ್ಲಿದೆ. * ಸತತವಾಗಿ ಐಸ್ಲ್ಯಾಂಡ್ 12 ನೇ ಬಾರಿಗೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ವಿಶ್ವದ ಅತ್ಯಂತ ಲಿಂಗ-ಸಮಾನ ದೇಶವಾಗಿ ಹೊರಹೊಮ್ಮಿದೆ.