Job Description: * ಈ ಹಿಂದೆ ಸರಿ ಸುಮಾರು ಎರಡು ವರ್ಷಗಳಿಂದ ಪಾಕಿಸ್ತಾನವು ಭಾರತದ ಸಕ್ಕರೆ ಮತ್ತು ಹತ್ತಿ ಆಮದಿಗೆ ನಿಷೇಧ ಹೇರಿತ್ತು ಇದೀಗ ಅತೀ ಶೀಘ್ರದಲ್ಲೇ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಪಾಕಿಸ್ತಾನವು ಸಿದ್ಧವಾಗಿದೆ ಎಂದು ನೂತನ ಹಣಕಾಸು ಸಚಿವ ಹಮ್ಮದ್ ಅಜರ್ ತಿಳಿಸಿದ್ದಾರೆ. * ಪಾಕಿಸ್ತಾನವು ಜೂನ್ ತಿಂಗಳಿನಿಂದ ಭಾರತದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲು ಪುನ: ಆರಂಭಿಸಲಿದೆ ಎಂದು ಹಮ್ಮದ್ ಅಜರ್ ಮಾಹಿತಿಯನ್ನು ನೀಡಿದರು. * ಪ್ರಸ್ತುತ ಪಾಕಿಸ್ತಾನವು ತನ್ನ ಖಾಸಗಿ ವಲಯಕ್ಕೆ ಭಾರತದಿಂದ ಐದು ಲಕ್ಷ ಟನ್ ಬಿಳಿ ಸಕ್ಕರೆಯನ್ನು ಖರೀದಿಸಲು ಆರ್ಥಿಕ ಸಮನ್ವಯ ಸಮಿತಿಯು ಅವಕಾಶವನ್ನು ಕಲ್ಪಿಸಿದೆ.