Job Description: * ಕೇಂದ್ರ ಸಚಿವ ಸಂಪುಟವು ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಸರಿ ಸುಮಾರು 10,900 ಕೋಟಿ ರೂ. ವೆಚ್ಚದ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ. * ಮುಂದಿನ 2026-27ರ ಸಮಯಕ್ಕೆ 2.5 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ ಮತ್ತು ಸಂಸ್ಕರಿಸಿದ ಆಹಾರ ಉತ್ಪಾದನೆ ಸಾಮರ್ಥ್ಯವನ್ನು 33,494 ಕೋಟಿ ರೂ.ಗೆ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಈ ಪಿಎಲ್ಐ (Production Linked Incentive) ಯೋಜನೆಗೆ ಒಪ್ಪಿಗೆಯನ್ನು ನೀಡಿದೆ. * ಈ ಯೋಜನೆಯಿಂದಾಗಿ ಭಾರತೀಯ ಬ್ರಾಂಡ್ಗಳನ್ನು ಉತ್ತೇಜಿಸಲು ಮತ್ತು ಕೃಷಿ ಉತ್ಪನ್ನಗಳ ಸಂಭಾವನೆ ಮತ್ತು ರೈತರಿಗೆ ಹೆಚ್ಚಿನ ಆದಾಯವನ್ನು ಹೆಚ್ಚಿಸುವದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವ ಸಂಪುಟ ತಿಳಿಸಿದೆ.