Job Description: * ಕೇಂದ್ರ ಸರ್ಕಾರವು GST ಪರಿಹಾರವನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆದಾಯ ತೆರಿಗೆಯ ಮೂಲಕ ಬಿಡುಗಡೆ ಮಾಡಿದೆ. * ಕೇಂದ್ರ ಸರ್ಕಾರದ ಪ್ರಸ್ತುತ ಹಣಕಾಸು ವರ್ಷ ಅಂತ್ಯವಾಗುತ್ತಿರುವದರಿಂದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು 30 ಸಾವಿರ ಕೋಟಿ ರೂ. GST ಪರಿಹಾರ ಬಿಡುಗಡೆಗೊಳಿಸಿದೆ. * ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 2970 ಕೋಟಿ ರೂ GST ಪರಿಹಾರ ಸೇರಿದಂತೆ ಹೊಸದಾಗಿ 30 ಸಾವಿರ ಕೋಟಿ ರೂ. ಪರಿಹಾರವನ್ನು ನೀಡಿದೆ. * ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು 2021ರ ಮಾರ್ಚ್ ಕೊನೆಗೊಂಡಂತೆ ಅಡಾಕ್ ಪರಿಹಾರವಾಗಿ 28 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ. ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಮಾಹಿತಿ : * ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. * ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. * ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ, ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು. * ಭಾರತದ ಕೇಂದ್ರಾಡಳಿತ ಪ್ರದೇಶಗಳು: ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ಚಂಡಿಗಡ್, ದಿಯು ಮತ್ತು ದಮನ್, ಲಕ್ಷದ್ವೀಪ್, ದೆಹಲಿಯ, ಪುದುಚೆರಿ, ಜಮ್ಮು ಮತ್ತು ಕಾಶ್ಮೀರ, ಲಡಾಕ್