Job Description: * ಛತ್ತೀಸ್ಗಢ ರಾಜ್ಯದ ಶಾಲಾ ಮಕ್ಕಳು ಮುಂಬರುವ ಶೈಕ್ಷಣಿಕ ವರ್ಷದಿಂದ ಭಾರತೀಯ ಸಂವಿಧಾನದ ಬಗ್ಗೆ ಅಧ್ಯಯನ ಮಾಡಲು ತಿಳಿಸಿದೆ ಎಂದು ಶಿಕ್ಷಣ ಸಚಿವ ಪ್ರೇಮ್ ಸಾಯಿ ಸಿಂಗ್ ಟೆಕಮ್ ತಿಳಿಸಿದ್ದಾರೆ. * ಪ್ರಸ್ತುತ ಪ್ರಾಥಮಿಕ, ಮಾಧ್ಯಮಿಕ ಮತ್ತು ಹೈಸ್ಕೂಲ್ ಹಂತದ ವಿದ್ಯಾರ್ಥಿಗಳಿಗಾಗಿ ಛತ್ತೀಸ್ಗಢ ರಾಜ್ಯವು ಸಂವಿಧಾನದ ಬಗ್ಗೆ ಪ್ರತ್ಯೇಕ ಪಠ್ಯಗಳನ್ನು ತಯಾರಿಸಿದೆ ಎಂದು ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಮಾಹಿತಿಯನ್ನು ನೀಡಿದೆ. * ಶೈಕ್ಷಣಿಕ ಪಠ್ಯಕ್ರಮದಲ್ಲಿ ಸಂವಿಧಾನದ ಮೂಲತತ್ವಗಳು ಮತ್ತು ಮೌಲ್ಯಗಳ ಮಾಹಿತಿಗಳನ್ನು ಹೇಳಿಕೊಡಲಾಗುವದು. * ಛತ್ತೀಸ್ಗಢ ರಾಜ್ಯದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಂವಿಧಾನ ಅಧ್ಯಯನ ಪುಸ್ತಕ ಸಿಗಲಿವೆ ಎಂದು ಶಾಲಾ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಅಲೋಕ್ ಶುಕ್ಲಾ ತಿಳಿಸಿದರು.