Job Description: * ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕ್ಯಾಬಿನೆಟ್ ಕೈಗೆಟುಕುವ ಬಾಡಿಗೆ ವಸತಿ ಯೋಜನೆಯನ್ನು ಘೋಷಿಸಿದೆ. * ಈ ವಸತಿ ಯೋಜನೆಯಿಂದ ವಿದ್ಯಾರ್ಥಿಗಳು, ನಗರ ವಲಸಿಗರು ಮತ್ತು ನಗರಗಳಲ್ಲಿ ವಾಸಿಸುವ ಬಡ ಜನರಿಗೆ ಕೈಗೆಟುಕುವ ದರದಲ್ಲಿ ಬಾಡಿಗೆ ವಸತಿ ಸಿಗಲಿದೆ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. * ಉತ್ತರ ಪ್ರದೇಶದ ಈ ವಸತಿ ಯೋಜನೆಯನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಾರಿಗೆ ತರಲಾಗುತ್ತದೆ ಎಂದು ಯು.ಪಿ. ಸರ್ಕಾರ ಹೇಳಿದೆ. * ಭಾರತ ಸರ್ಕಾರದ ಉಪಕ್ರಮ ಅಡಿಯಲ್ಲಿ ಮಾರ್ಚ್ 31, 2022 ರ ಸಮಯಕ್ಕೆ 2 ಕೋಟಿ ವಸತಿ ಮನೆಗಳನ್ನು ನಗರದ ಬಡ ಜನರಿಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ರವರು ತಿಳಿಸಿದರು.