Job Description: * ಜಪಾನ್ ದೇಶವು ಭಾರತ ದೇಶಕ್ಕೆ 14,889 ಕೋಟಿ ರೂ. ಸಾಲ ನೀಡಲಿದೆ ಎಂದು ತಿಳಿದು ಬಂದಿದೆ. * ಈ ಸಾಲದಿಂದಾಗಿ ಭಾರತದ ಯೋಜನೆಗಳಿಗೆ ಅಂದರೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ರೈಲು ವಿಸ್ತರಣೆ ಯೋಜನೆ, ಹೀಗೆ ಇನ್ನಿತರ ಯೋಜನೆಗಳಿಗೆ ಈ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. * ಜಪಾನ್ ದೇಶ ನೀಡುವ ಸಾಲದಿಂದ, ಹಿಮಾಚಲ ಪ್ರದೇಶದ ಬೆಳೆ ವೈವಿಧ್ಯೀಕರಣ ಯೋಜನೆ, ರಾಜಸ್ಥಾನದಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ವಿದ್ಯುತ್ ಸರಬರಾಜು ಪರಿಸ್ಥಿತಿ ಸುಧಾರಿಸಲು 4 ಬಿಲಿಯನ್ ಯೆನ್ ಅನುದಾನದ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. * ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸಿ.ಎಸ್ ಮೊಹಾಪಾತ್ರ ಮತ್ತು ಜಪಾನಿನ ರಾಯಭಾರಿ ಸುಜುಕಿ ಸಟೋಶಿ ರವರು ಈ ಒಪ್ಪಂದಕ್ಕೆ ಪರಸ್ಪರ ಒಪ್ಪಿಗೆಯನ್ನು ನೀಡಿ ಸಹಿ ಹಾಕಿದರು. * ಜಪಾನಿನಿಂದ ಪಡೆದ ಸಾಲದಲ್ಲಿ 120 ಬಿಲಿಯನ್ ಯೆನ್ ದೆಹಲಿ ಮೆಟ್ರೋ ಯೋಜನೆ ಸಲುವಾಗಿ ಮತ್ತು 50 ಬಿಲಿಯನ್ ಯೆನ್ ಬೆಂಗಳೂರು ಮೆಟ್ರೋ ಯೋಜನೆಗೆ ಬಳಸಿಕೊಳ್ಳಲಿದೆ. * 45 ಬಿಲಿಯನ್ ಯೆನ್ ಸಾಲದಿಂದ ರಾಜಸ್ಥಾನದಲ್ಲಿ ನೀರಿನ ಯೋಜನೆ ಕಾಮಕಾರಿಗೆ ಬಳಸಿಕೊಳ್ಳಲಾಗುವದು ಎಂದು ಭಾರತ ಸರ್ಕಾರ ತಿಳಿಸಿದೆ.